ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲಿನ ಕತೆ ಇದು..! ಅವತ್ತೊಂದು ದಿನ ಪಂಜಾಬಿನ ಸಣ್ಣ ಹಳ್ಳಿಯ ಹೊಲದ ಬದಿಯಲ್ಲಿ ಬಾಲಕನೊಬ್ಬನ ತಂದೆ ಮತ್ತು ಅವರ ಮಿತ್ರರೊಬ್ಬರು ನಡೆದು ಕೊಂಡು ಹೋಗ್ತಾ ಇರ್ತಾರೆ,..! ದೂರದಲ್ಲಿ ಯಾರೋ ಏನೋ ಮಾಡುತ್ತಿದ್ದಂತೆ ಕಂಡು ಬರುತ್ತದೆ..! ಅದು ಯಾರು? ಹೊಲದಲ್ಲಿ ಏನು ಮಾಡುತ್ತಿದ್ದಾರೆಂದು ಹತ್ತಿರಹೋಗಿ ನೋಡಿದರೆ ಆ ತಂದೆಯ ಮಗ..! ಏನಪ್ಪಾ, ಇಲ್ಲಿ ಏನು ಮಾಡ್ತಾ ಇದ್ದೀಯಾ…? ಅಂತ ಕೇಳ್ತಾರೆ..! ಪಪ್ಪಾ, ಹೊಲದ ತುಂಬಾ ಬಂದೂಕನ್ನು ಹೂತಿಡುತ್ತಿದ್ದೇನೆ..! “ಈ ಬಂದೂಕುಗಳು ಬೆಳೆಯುತ್ತವೆ..! ಬ್ರಿಟೀಷರನ್ನು ಭಾರತದಿಂದ ಓಡಿಸಲು ಈ ಬಂದೂಕುಗಳೇ ನೆರವಾಗುವಂತಹವು”.., ಎಂದು ಕೆಚ್ಚೆದೆಯಿಂದ ಆ ಬಾಲಕ ತನ್ನ ತಂದೆಗೆ ಹೇಳುತ್ತಾನೆ..! ಮಗನ ದೇಶಪ್ರೇಮವನ್ನು ಕಂಡ ತಂದೆ ಹೆಮ್ಮೆಯಿಂದ ಶಹಬ್ಬವಾಶ್ ಮಗನೇ ಅನ್ನುತ್ತಾರೆ..! ಆತನ ತಂದೆಯ ಮಿತ್ರರೂ ಸಹ ಈ ಬಾಲಕನ ದೇಶಪ್ರೆಮವನ್ನು ಕೊಂಡಾಡುತ್ತಾರೆ..! ಆ ಸಮಯದಲ್ಲಿ ಆ ಗಂಡೆದೆಯ ಬಾಲಕನಿಗೆ ಕೇವಲ ಮೂರೇ ವರ್ಷ..! ಅಷ್ಟೊಂದು ಚಿಕ್ಕವಯಸ್ಸಿನಲ್ಲಿಯೇ ಅಪಾರ ದೇಶಪ್ರೇಮವನ್ನು ಮೈಗೂಡಿಸಿಕೊಂಡಿದ್ದ ಆ ಬಾಲಕ ಆ ವಯಸ್ಸಿನಲ್ಲಿಯೇ ಬ್ರಿಟೀಷರ ವಿರುದ್ಧ ಕ್ರಾಂತಿಯ ಕಹಳೆಯನ್ನು ಊದುವ ಸೂಚನೆಯನ್ನೂ ನೀಡಿದ್ದ..! ಅದು ಸತ್ಯವಾಯಿತೂ ಕೂಡ..! ಆ ಹುಡುಗ ಬ್ರೀಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ..! ದೇಶಕ್ಕಾಗಿ ತನ್ನ 23ನೇ ವಯಸ್ಸಿನಲ್ಲಿಯೇ ಪ್ರಾಣತ್ಯಾಗ ಮಾಡಿದ..! ಆ ಬಾಲಕ ಇಂದಿಗೂ ಭಾರತದ ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿದಿದ್ದಾನೆ..! ಆ ಬಾಲಕ ಒನ್ ಅಂಡ್ ಓನ್ಲಿ “ಭಗತ್ ಸಿಂಗ್”..!
ಈ “ಭಗತ್ ಸಿಂಗ್” ಗೆ ಅತ್ಯಂತ ಸಣ್ಣವಯಸ್ಸಿನಲ್ಲಿಯೇ ಅತಿಯಾಗಿ ಕಾಡಿದ್ದು 1919ರ “ಜಲಿಯನ್ ವಾಲಭಾಗ್ ಹತ್ಯಾಕಾಂಡ..”! ಆಗ ಸಾವಿರಾರು ಜನರು ಹತ್ಯೆಯಾಗಿದ್ದ ಸುದ್ದಿ ದೇಶದಾದ್ಯಂತ ಹರಡಿತ್ತು..! ಅದು ಭಗತ್ ಸಿಂಗ್ ರ ಕಿವಿಗೂ ಬಿತ್ತು..! ಆ ದಿನ ಶಾಲೆಯಿಂದ ಬರುವಾಗ ತನ್ನ ಬ್ಯಾಗ್ ಅನ್ನು ತಂಗಿಯ ಕೈಗೆ ಕೊಟ್ಟು ಹೇಳದೆ ಕೇಳದೆ ಓಡಿ ಹೋಗ್ತಾರೆ..! ಮನೆಯತ್ತ ಮರಳಿ ಬಂದಾಗ ಅವರ ಪೆನ್ನಿನಲ್ಲಿ ಇಂಕಿನ ಬದಲು ಮಣ್ಣಿತ್ತು..! ಆ ಮಣ್ಣು ಅಂತಿಂತ ಮಣ್ಣಾಗಿರಲಿಲ್ಲ, ದೇಶಕ್ಕಾಗಿ ಬ್ರೀಟೀಷರ ವಿರುದ್ಧ ಹೋರಾಡುತ್ತಾ ಪ್ರಾಣತ್ಯಾಗ ಮಾಡಿದ ಮಹಾನ್ ದೇಶಪ್ರೇಮಿಗಳ ರಕ್ತ ಚೆಲ್ಲಿದ್ದ ಮಣ್ಣದು..! ಆ ಮಣ್ಣಿನ ಪೆನ್ನನ್ನು ದೇವರ ಕೋಣೆಯಲ್ಲಿಟ್ಟು ಭಗತ್ ಪೂಜೆ ಮಾಡಲಿಕ್ಕೆ ಶುರು ಮಾಡ್ತಾರೆ…! ಬ್ರೀಟಿಷರ ವಿರುದ್ಧ ಕ್ರಾಂತಿಯ ಕಹಳೆಯನ್ನೂದಿ ಸ್ವಾಂತಂತ್ರ್ಯ ಭಾರತವನ್ನು ಕಟ್ಟಲೇ ಬೇಕೆಂಬ ಪಣವನ್ನೂ ತೊಡ್ತಾರೆ..!
This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.
ಅಂದಹಾಗೆ, ಇವರಲ್ಲಿ ದೇಶಪ್ರೇಮ ಹುಟ್ಟಿನಿಂದಲೇ ರಕ್ತಗತವಾಗಿ ಬಂದಿತ್ತು..! ಚಿಕ್ಕಪ್ಪಂದಿರಾದ “ಅಜಿತ್ ಸಿಂಹ” ಮತ್ತು “ಸ್ವರ್ಣಸಿಂಹ”ರಿಂದಲೂ ಪ್ರಭಾವಿತರಾಗಿದ್ದರು..! ಬೇರೆ ಬೇರೆ ಸಾಹಿತ್ಯಗಳನ್ನೂ, ದೇಶಗಳ ಇತಿಹಾಸವನ್ನೂ ತಿಳಿದಿದ್ದರು..! ಅವುಗಳ ಪ್ರಭಾವ ಕೂಡ ಗಾಢವಾಗಿಯೇ ಬೀರಿತ್ತು..! ಇವೆಲ್ಲಕ್ಕಿಂತಲೂ ಹೆಚ್ಚಾಗಿ ಅತ್ಯಂತ ಕಿರಿವಯಸ್ಸಿನಲ್ಲಿ (20) ನೇಣಿಗೇರಿದ್ದ “ಕರ್ತಾರ್ ಸಿಂಗ್ ಸಾರಾಭಾ” ಸ್ಪೂರ್ತಿಯ ಚಿಲುಮೆಯಾಗಿದ್ದರು..! ನಂತರ ಗಾಂಧೀ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಜೊತೆ ಚರ್ಚಿಸಿ ತಾನೂ ದೇಶಕ್ಕಾಗಿ ಹೋರಾಡಲು ಸನ್ನದ್ಧರಾದರು..!
ಬ್ರೀಟೀಷರನ್ನು ಇನ್ನಿಲ್ಲದಂತೆ ಕಾಡಿದರೂ, ನ್ಯಾಯಾಲಯದಲ್ಲಿಯೂ ಘಂಟಾಘೋಷವಾಗಿ ದನಿ ಎತ್ತಿ ಮಾತನಾಡಿದರು..! ಬ್ರಿಟೀಷರಿಗೆ ದೊಡ್ಡ ತಲೆಬೇನೆ ಆದರು..! ಆಗಲೇ ಬ್ರೀಟಿಷರಿಗೆ ಅನಿಸಿದ್ದು, “ಈ ಯುವಕನ್ನು ಹೀಗೇ ಬಿಟ್ಟರೆ ನಮಗೆ ಖಂಡಿತಾ ಉಳಿಗಾಲವಿಲ್ಲವೆಂದು..”! ಇದನ್ನು ಮನಗಂಡ ಬ್ರೀಟೀಷರು ಭಗತ್ ರನ್ನು ಸೆರೆಹಿಡಿಯುತ್ತಾರೆ..!
ಮಾರ್ಚ್ 23, 1931ರಂದು ಲಾಹೋರಿನ ಸೆಂಟ್ರಲ್ ಜೈಲಿನಲ್ಲಿ ಭಗತ್ ಸಿಂಗ್ ಹಾಗೂ ಇನ್ನಿಬ್ಬರು ಕ್ರಾಂತಿಕಾರಿ ಹೋರಾಟಗಾರರಾದ, ರಾಜ್ ಗುರು, ಸುಖದೇವ್ ರನ್ನೂ ಬ್ರಿಟೀಷೆರು ನೇಣಿಗೇರಿಸಿದರು..! “ನಗುನಗುತ್ತಲೇ” ನೇಣಿನ ಕುಣಿಕೆಗೆ ಕೊರಳನ್ನೊಡಿದ ಈ ಮೂವರಲ್ಲೂ ಸಾವಿನ ಭಯವಿರಲಿಲ್ಲ.., ದೇಶಪ್ರೇಮದ ಆಶಾಕಿರಣ ಪ್ರಜ್ವಲಿಸುತ್ತಿತ್ತು..! ಅಂದು ನೇಣಿಗೇರುವಾ ಭಗತ್ ಸಿಂಗ್ ಗೆ ಕೇವಲ 23 ವರ್ಷ..! ಸುಖ್ ದೇವ್ ಗೂ ಅಷ್ಟೇ ವರ್ಷ..! ರಾಜ್ ಗುರುವಿಗೂ ಕೇವಲ 24 ವರ್ಷ..! ಹೀಗೆ ಭವಿಷ್ಯವನ್ನು ರೂಪಿಸಿಕೊಳ್ಳ ಬೇಕಾಗಿದ್ದ ವಯಸ್ಸಲ್ಲಿ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟು ಹುತಾತ್ಮರಾದರು.. ! ಇಂದು ಅದೇ ಭಗತ್ ಸಿಂಗ್ 109ನೇ ಜನ್ಮದಿನ..! ಸ್ವರ್ಗದಲ್ಲಿರುವ ಭಗತ್ ಗೆ ಹ್ಯಾಪಿ ಬರ್ತ್ ಡೇ..! ಭಗತ್ ಮತ್ತೆ ಹುಟ್ಟಿ ಬನ್ನಿ..!
- ಶಶಿಧರ ಡಿ ಎಸ್ ದೋಣಿಹಕ್ಲು
POPULAR STORIES :
ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!
ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳು..!
ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!
ಹೋಗ್ತಾ ಸಿಂಗಲ್ ಬರ್ತಾ ಡಬಲ್..!
ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com