ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಭಾವನಾ ಬಿಜೆಪಿಗೆ ಸೇರ್ಪಡೆ…!

admin
By admin
0 Min Read

ನಟಿ ಭಾವನಾ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.‌
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಭಾವನಾ ಇದೀಗ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ.
ಬಿಜೆಪಿ ಸೇರುವ ಬಗ್ಗೆ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಮುರುಳೀಧರ ರಾವ್ ಜೊತೆ ಭಾವನಾ ಮಾತುಕತೆ ನಡೆಸಿದ್ದರು‌ . ನಂತರ ಮುರುಳೀಧರ ರಾವ್ ಸಮ್ಮುಖದಲ್ಲಿ ಅಧಿಕೃತವಾಗಿ ಕಮಲ ಪಾಳಯ‌ ಸೇರಿದರು.


ಹಿಂದೆ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಆಜಾನ್ ಮಾಡುವಾಗಲೇ ಪ್ರತಿಭಟಿಸಿ ಭಾವನ ವೇದಿಕೆಯಿಂದ ಹೊರಬಂದಿದ್ದರು. ಇಂದು ಬಿಜೆಪಿ ಸೇರಿದ್ದಾರೆ.

Share This Article