ಬಿಗ್ ಬಾಸ್ ಕನ್ನಡ ಸೀಸನ್5ರ ನಾಲ್ಕನೇ ವಾರದ ಕ್ಯಾಪ್ಟನ್ ಆಗಿ ಜನಸಾಮಾನ್ಯ ಸ್ಪರ್ಧಿ ರಿಯಾಜ್ ಆಯ್ಕೆಯಾಗಿದ್ದಾರೆ.
ಮೊದಲ ಎರಡುವಾರ ಸತತ ಇಬ್ಬರು ಸೆಲಬ್ರಿಟಿಗಳು ಕ್ಯಾಪ್ಟನ್ ಆಗಿದ್ದರು. ಆ ಎರಡೂ ವಾರದಲ್ಲೂ ಜನಸಾಮಾನ್ಯ ಸ್ಪರ್ಧಿಗಳು ಮನೆಯಿಂದ ಹೊರ ಹೋಗಿದ್ದರು. ಕಳೆದವಾರ ಜನಸಾಮಾನ್ಯ ಸ್ಪರ್ಧಿ ಸಮೀರ್ ಆಚಾರ್ಯ ಕ್ಯಾಪ್ಟನ್ ಆಗಿದ್ದರು. ಕಾಕತಾಳಿಯ ಎಂಬಂತೆ ಸೆಲಬ್ರಿಟಿ ಸ್ಪರ್ಧಿ ದಯಾಳ್ ಔಟ್ ಆಗಿದ್ದಾರೆ. ಈ ವಾರವೂ ಜನಸಾಮಾನ್ಯ ಸ್ಪರ್ಧಿ ರಿಯಾಜ್ ನಾಯಕರಾಗಿದ್ದು, ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾದುನೋಡಬೇಕು.
ಅಂದಹಾಗೆ ಅನುಪಮಾ, ಸಿಹಿಕಹಿ ಚಂದ್ರು, ಜಯ ಶ್ರೀನಿವಾಸನ್, ಕಾರ್ತಿಕ್, ನಿವೇದಿತಾ, ಸಮೀರ್ ಆಚಾರ್ಯ, ತೇಜಸ್ವಿನಿ, ಜಗನ್ನಾಥ್ ಎಲಿಮಿನೇಷನ್‍ಗೆ ನಾಮಿನೇಟ್ ಆಗಿದ್ದಾರೆ.