ಕನ್ನಡ ಬಿಗ್ ಬಾಸ್ ಸೀಸನ್ 5 ರ ಸ್ಪರ್ಧಿ ತೇಜಸ್ವಿನಿಗೆ ತನ್ನ ಅಮ್ಮ ನ ಜೊತೆ ಮಾತನಾಡೋ ಅವಕಾಶವನ್ನು ಬಿಗ್ ಬಾಸ್ ಕಲ್ಪಿಸಿದರು…! ದೂರವಾಣಿ ಮೂಲಕ ತೇಜಸ್ವಿನಿ ಅವರ ತಾಯಿಯನ್ನು ಸಂಪರ್ಕಿಸಿ ತೇಜಸ್ವಿನಿ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟರು.
ಹೌದು, ತೇಜಸ್ವಿನಿ ಅವರ ತಂದೆ ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ತೇಜಸ್ವಿನಿ ಅವರ ಜೊತೆ ಮಾತನಾಡಲು ಬಯಸಿದ್ದಾರೆ. ಈ ವಿಷಯವನ್ನು ತೇಜಸ್ವಿನಿಗೆ ತಿಳಿಸಿದ ಬಿಗ್ ಬಾಸ್ ನೀವು ಬಿಗ್ ಬಾಸ್ ಮನೆಯಲ್ಲಿ ಮುಂದುವರೆಯಲು ಬಯಸುತ್ತೀರ ಅಥವಾ ಮನೆಗೆ ಹೋಗ ಬಯಸುತ್ತೀರ? ಎಂದು ತೇಜಸ್ವಿನಿ ಅವರನ್ನು ಕೇಳಿದ್ರು. ನಂತರ ತೇಜಸ್ವಿನಿ ಅವರ ಮನವಿ ಮೇರೆಗೆ ಅವರ ತಾಯಿ ಜೊತೆ ಮಾತನಾಡೋ ಅವಕಾಶ ನೀಡಿದರು. ತಂದೆಯವರಿಗೆ ಕಿಡ್ನಿ ಆಪರೇಷನ್ ಆಗಿದ್ದು, ನೀನು ಬರುವುದು ಒಳ್ಳೆಯದು ಎಂಬ ಅಭಿಪ್ರಾಯ ತಾಯಿಯಿಂದ ಬಂದಿದೆ. ಆದರೆ, ತಂದೆಯ ಆರೋಗ್ಯ ಸ್ಥಿತಿಯ ಬಗ್ಗೆ ಖಚಿತವಾಗಿ ಹೇಳುವಂತೆ ತೇಜಸ್ವಿನಿ ಕೇಳಿಕೊಂಡರು. ಬಳಿಕ ನಿನ್ನ ಆರೋಗ್ಯ ನೋಡಿಕೊಳ್ಳು, ನಾನು ಬರ್ತೀನಿ ಎಂದು ತೇಜಸ್ವಿನಿ ತಾಯಿಗೆ ಹೇಳಿದ್ದಾರೆ.
ಬಿಗ್ ಬಾಸ್ ತೇಜಸ್ವಿನಿ ಅವರಿಗೆ ನಿರ್ಧಾರ ತಿಳಿಸಲು ಕಾಲವಕಾಶ ಕೇಳಿದ್ದಾರೆ.