ನಟಿ ತೇಜಸ್ವಿನಿ ಬಿಗ್‍ಬಾಸ್ ಮನೆಗೆ ಮರಳಿದ್ದಾರೆ. ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಗ್‍ಬಾಸ್ ಮನೆಯಿಂದ ಹೊರ ಬಂದಿದ್ದ ನಟಿ. ವಾಪಸ್ಸು ಬಿಗ್ ಬಾಸ್‍ಗೆ ಎಂಟ್ರಿಕೊಟ್ಟಿದ್ದಾರೆ.
ತಂದೆಯ ಯೋಗಕ್ಷೇಮ ವಿಚಾರಿಸಿಕೊಂಡು ಬಂದಿರುವ ತೇಜಸ್ವಿನಿಗೆ ಮನೆಯ ಸದಸ್ಯರು ಆತ್ಮೀಯ ಸ್ವಾಗತಕೋರಿದರು. ನನಗೆ ತಂದೆ ದೈರ್ಯ ಹೇಳಿಕಳಿಸಿದ್ದಾರೆ ಎಂದು ಹೇಳಿದ ಇವರು, ಒಂದು ದಿನ ನಿಮ್ಮನೆಲ್ಲಾ ಮಿಸ್ ಮಾಡಿಕೊಂಡೆ ಎಂದು ಮನೆಯ ಸದಸ್ಯರಿಗೆ ಹೇಳಿದ್ರು.