ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಈ ಸ್ಟಾರ್ ನಿರೂಪಕಿ…!

Date:

ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ (ಕನ್ನಡ) ಸೀಸನ್ 6 ಇನ್ನೇನು ಬಂದೇ ಬಿಟ್ಟಿತು.
ಬಿಗ್ ಬಾಸ್ ಮನೆಗೆ ಈ ಬಾರಿ ಯಾರೆಲ್ಲಾ ಹೋಗ್ತಾರೆ ಎಂಬ ಚರ್ಚೆಗಳು ಈಗಾಗಲೇ ಶುರುವಾಗಿವೆ. ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಸೌಭಾಗ್ಯ ಕೆಲವರಿಗೆ ಅದಾಗಿಯೇ ಒಲಿದು ಬರಲಿದೆ. ಇನ್ನು ಕೆಲವರು ಅದಕ್ಕಾಗಿಯೇ ಸಿಕ್ಕಾಪಟ್ಟೆ ತಯಾರಿ ನಡೆಸುತ್ತಾರೆ.


ಬಿಗ್ ಬಾಸ್ ಮನೆಗೆ ಜನಸಾಮಾನ್ಯರು ಸೇರಿದಂತೆ ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದವರಿಗೆ ಪ್ರವೇಶ ಯೋಗವಿದೆ.
ಡಬ್ ಸ್ಮ್ಯಾಶ್ ಜೋಡಿಯಾದ ಅಲ್ಲು ರಘು ಮತ್ತು ಸುಷ್ಮಿತಾ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಕೆಲವು ದಿನಗಳ ಹಿಂದೆ ನೀವಿಲ್ಲಿ ಓದಿದ್ದೀರಿ.
ಅಂದಹಾಗೆ ಮಾಧ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿದ ಮಂದಿಗೆ ಬಿಗ್ ಬಾಸ್ ಮನೆಯ ಬಾಗಿಲು ತೆರೆದಿರುತ್ತದೆ.
ಈ ಬಾರಿ ಹೆಸರಾಂತ ನಿರೂಪಕಿಯೊಬ್ಬರು ಬಿಗ್ ಬಾಸ್ ಗೆ ಹೋಗ್ತಿದ್ದಾರೆ. ಕಳೆದ ಸೀಸನ್ ನಲ್ಲೂ ಇವರ ಹೆಸರು ಕೇಳಿಬಂದಿತ್ತು. ಆದರೆ, ಹೋಗಿರಲಿಲ್ಲ. ಈ ಬಾರಿ ಇವರು ಬಿಗ್ ಬಾಸ್ ಮನೆಗೆ ಹೋಗುವುದು ಪಕ್ಕಾ ಎಂದು ಹೇಳಲಾಗುತ್ತಿದೆ.
ಯಾರಿವರು?

ರಾಧ ಹಿರೇಗೌಡರ್…! ?
ಯಸ್ ಈ ಬಾರಿ ರಾಧ ಹಿರೇಗೌಡರ್ ಬಿಗ್ ಬಾಸ್ ಗೆ ಹೋಗಲಿದ್ದಾರಂತೆ. ಪಬ್ಲಿಕ್ ಟಿವಿ ಮೂಲಕ ಅತ್ಯಂತ ಹೆಚ್ಚಿನ‌ ಜನಪ್ರಿಯತೆ ಪಡೆದ ಇವರು ಈಗ ಬಿ ಟಿವಿಯಲ್ಲಿದ್ದಾರೆ. ತಮ್ಮದೇ ಆದ ನಿರೂಪಣಾ ಶೈಲಿ, ಡಿಸ್ಕಶನ್ ಮೂಲಕ ಮನೆಮಾತಾಗಿರುವ ರಾಧ ಹಿರೇಗೌಡರ್ ಸುದ್ದಿವಾಹಿನಿಗಳಿಂದ ಬ್ರೇಕ್ ತೆಗೆದುಕೊಂಡು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರೆ ಎಂಬ ಮಾತು ಎಲ್ಲೆಡೆ ಕೇಳಿ ಬರ್ತಿದೆ.
ಇವರನ್ನು ಬಿಗ್ ಬಾಸ್ ಮನೆಯಲ್ಲಿ ನೋಡುವ ಕುತೂಹಲವೂ ಸಹ ಅಭಿಮಾನಿಗಳಲ್ಲಿದೆ. ಈ ಕುತೂಹಲ ತಣಿಯಲು ಬಿಗ್ ಬಾಸ್ ಆರಂಭವಾಗಲೇ ಬೇಕು‌. ಕಾದು ನೋಡೋಣ ಬಿಟಿವಿಯ ಈ ನಿರೂಪಕಿ ಬಿಗ್ ಬಾಸ್ ಮನೆಗೆ ಹೋಗ್ತಾರ ಅಂತ…!

Share post:

Subscribe

spot_imgspot_img

Popular

More like this
Related

ಬಿಜೆಪಿ ಜನರ ಮೊದಲ ಆಯ್ಕೆ, ಕಾಂಗ್ರೆಸ್ ದೇಶದ ವಿಶ್ವಾಸ ಕಳೆದುಕೊಂಡಿದೆ: ಪ್ರಧಾನಿ ಮೋದಿ ವಾಗ್ದಾಳಿ

ಬಿಜೆಪಿ ಜನರ ಮೊದಲ ಆಯ್ಕೆ, ಕಾಂಗ್ರೆಸ್ ದೇಶದ ವಿಶ್ವಾಸ ಕಳೆದುಕೊಂಡಿದೆ: ಪ್ರಧಾನಿ...

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಅಟ್ಟಹಾಸ: ಕ್ಷುಲ್ಲಕ ಕಾರಣಕ್ಕೆ ಸಹಾಯಕ ಜೈಲರ್ ಮೇಲೆ ಹಲ್ಲೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಅಟ್ಟಹಾಸ: ಕ್ಷುಲ್ಲಕ ಕಾರಣಕ್ಕೆ ಸಹಾಯಕ ಜೈಲರ್...

ಬಿಗ್ ಬಾಸ್ ಕನ್ನಡ ಸೀಸನ್ 12: ಗಿಲ್ಲಿ–ಅಶ್ವಿನಿ ಮಧ್ಯೆ ಟೈಟ್ ಫೈಟ್, ಫೈನಲ್ ಗೆಲುವಿಗೆ ಕುತೂಹಲ

ಬಿಗ್ ಬಾಸ್ ಕನ್ನಡ ಸೀಸನ್ 12: ಗಿಲ್ಲಿ–ಅಶ್ವಿನಿ ಮಧ್ಯೆ ಟೈಟ್ ಫೈಟ್,...

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬೀಸಾಕೋ ಅಭ್ಯಾಸವಿದ್ರೆ ಈಗ್ಲೆ ಬಿಟ್ಟುಬಿಡಿ; ಇದರಲ್ಲೂ ಅಡಗಿದೆ ನಾನಾ ಲಾಭಗಳು!

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬೀಸಾಕೋ ಅಭ್ಯಾಸವಿದ್ರೆ ಈಗ್ಲೆ ಬಿಟ್ಟುಬಿಡಿ; ಇದರಲ್ಲೂ...