ಇವರು ಮಾಡಲೆತ್ನಿಸಿದ ಕಳ್ಳತನ ಯಶಸ್ಸು ಆಗಲಿಲ್ಲ. ಆದರೆ, ಇವರ ಪ್ರಯತ್ನ, ಬ್ಯಾಂಕ್ ದರೋಡೆಗೆ ಇವರು ಮಾಡಿರುವ ಘನಂದಾರಿ ಕೆಲಸ ನೋಡಿದ್ರೆ ಎಂಥವರೂ ನಿಬ್ಬೆರಾಗ್ತಾರೆ. ಇವರು ಅಂತಿಂಥ ದರೋಡೆಕೋರರಲ್ಲ..!
ಇದು ಬ್ರೆಜೆಲ್‍ನ ಪೊಲೊ ನಗರದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆ. ಅದೃಷ್ಟಕ್ಕೆ ಪೊಲೀಸರ ಸಮಯ ಪ್ರಜ್ಞೆಯಿಂದ ದರೋಡೆಕೋರರ ಕೆಲಸ ಸಕ್ಸಸ್ ಆಗಿಲ್ಲ ಎನ್ನುವುದೇ ತೃಪ್ತಿ. ದರೋಡೆ ಯಶಸ್ಸು ಆಗದಿದ್ದರೇನಂತೆ ಇವರು ದರೋಡೆಗೆ ಮಾಡಿದ ಪ್ಲಾನ್ ಮಾತ್ರ ಬೆಚ್ಚಿ ಬೀಳಿಸುವಂತಹದು.
ಪೊಲೊ ನಗರದ ಬ್ಯಾಂಕೋ ಡಿ ಬ್ರೆಸಿಲ್ ಬ್ಯಾಂಕ್ ಶಾಖೆಯನ್ನು ದರೋಡೆ ಮಾಡೋಕೆ 16 ಮಂದಿ ದರೋಡೆಕೋರರು 4 ತಿಂಗಳಿಂದ ನಿರಂತರ ಪ್ರಯತ್ನ ಮಾಡಿದ್ರು..! ದರೋಡೆಗಾಗಿಯೇ ಹಗಲಿರುಳು ದುಡಿದಿದ್ರು..! ಬ್ಯಾಂಕ್ ಶಾಖೆಯ ಹತ್ತಿರದ ಮನೆಯಿಂದ ಸುರಂಗ ಮಾರ್ಗ ಕೊರೆದಿದ್ದೇ ಈ ಪುಣ್ಯಾತ್ಮರ ಮಹಾನ್ ಕಾರ್ಯ. ಸುಮಾರು 4 ತಿಂಗಳಿಂದ ಸುರಂಗ ಕೊರೆಯುವ ಸಹಾಸಕ್ಕೆ ಕೈ ಹಾಕಿದ್ದ ಖದೀಮರು ಬರೊಬ್ಬರಿ 2ಸಾವಿರ ಅಡಿ ಉದ್ದದ ಸುರಂಗ ಕೊರೆಯುವಲ್ಲಿ ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲ ಬೇಕಾದಂಗೆ ಲೈಟ್ ವ್ಯವಸ್ಥೆಯನ್ನೂ ಕೂಡ ಮಾಡಿಕೊಂಡಿದ್ದರು. ಆದರೆ,
ಪೊಲೀಸರು ದರೋಡಗೆ ಅವಕಾಶ ಮಾಡಿಕೊಡಲಿಲ್ಲ. ಸೋಮವಾರ ಖದೀಮರನ್ನು ಬಂಧಿಸಿ, ದೊಡ್ಡ ದರೋಡೆಯನ್ನು ತಪ್ಪಿಸಿದ್ದಾರೆ.