ಮಹಿಳೆಯೊಬ್ಬರನ್ನು ಬೆತ್ತಲೆ ಮಾಡಿ, ಮೆರವಣಿಗೆ ನಡೆಸಿ, ಅಮಾನವೀಯ ರೀತಿಯಲ್ಲಿ ಹಲ್ಲೆ ಮಾಡಿರುವ ಘಟನೆ ಬಿಹಾರದ ಬೈಯ್ಯಾ ಪಟ್ಟಣದಲ್ಲಿ ನಡೆದಿದೆ.
ಮಹಿಳೆ ವಿಮ್ಲೇಶ್ ಸಾವ್ ಎಂಬ ಯುವಕನನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿ ಈ ರೀತಿ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ.

ಯುವಕನ ಮೃತದೇಹ ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿದೆ. ಯುವಕನ ಕೊಲೆ ವಿಚಾರಕ್ಕೆ ಗ್ರಾಮದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಗಡಿ, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಯುವಕನ ಕೊಲೆಗೂ ಮಹಿಳೆಗೂ ಸಂಬಂಧ ಇದೆ ಎಂದು ಶಂಕೆಯಿಂದ ಆಕೆಯನ್ನು ಮನೆಯಿಂದ ಆಚೆ ಎಳೆದುಕೊಂಡು ಬಂದು ನಗ್ನಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಟೆಷನ್ ಆಫೀಸರ್, ಸರ್ಕಾರಿ ರೈಲ್ವೆ ಇನ್ ಚಾರ್ಜ್ ಆಫೀಸರ್ ಸೇರಿ ಒಟ್ಟು 8 ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಭೋಜ್ಪುರ ಪೊಲೀಸ್ ಠಾಣೆಯ ಮೇಲ್ವೀಚಾರಕ ಅವಕಾಶ್ ಕುಮಾರ್ ಪ್ರಕರಣದ ತನಿಖೆ ಹೊಣೆ ವಹಿಸಿಕೊಂಡಿದ್ದಾರೆ.






