ಬೈಕ್ ಸವಾರನೊಬ್ಬ ಪೊಲೀಸ್ ಗೆ ಬೈಕ್ ಡಿಕ್ಕಿ ಹೊಡೆದು ಪರಾರಿಯಾಗಿರೋ ಘಟನೆ ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಟ್ರಾಫಿಕ್ ಪೊಲೀಸರು ತಪಾಸಣೆ ನಡೆಸುವ ವೇಳೆ ಹೆಲ್ಮೆಟ್ ಧರಿಸದೇ ಬಂದಿದ್ದ ಸವಾರರು ಫೈನ್ ಕಟ್ಟದೆ ಪೊಲೀಸರ ಮೇಲೆ ಬೈಕ್ ಹರಿಸಿ ಪರಾರಿಯಾಗಿದ್ದಾರೆ. ಎಚ್ ಎಸ್ ಆರ್ ಲೇಔಟ್ ಸಂಚಾರಿ ಠಾಣೆಯ ಪಿಎಸ್ ಐ ರವೀಂದ್ರ ರಾವ್ ಅವರು ಗಾಯಗೊಂಡಿದ್ದಾರೆ. ಈ ಬಗ್ಗೆ ಎಚ್ ಎಸ್ ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



