ಬೈಕ್‍ನಲ್ಲಿ ಸ್ಟಂಟ್ ಪ್ರದರ್ಶನ ಮಾಡುವ ಯುವಕರೇ ಎಚ್ಚರಾ… ಎಚ್ಚರ…!

Date:

ಬೆಂಗಳೂರಿನ ಜನ ನಿಬಿಡ ಪ್ರದೇಶಗಳಲ್ಲಿ ಒನ್ ವ್ಹೀಲ್ ಬೈಕ್ ಸ್ಟಂಟ್ ಮಾಡ್ಕೊಂಡು ಕೆಲವೊಂದು ಅವಾಂತರ ಸೃಷ್ಟಿಸುತ್ತಿರೋ ಬೈಕ್ ರೈಡರ್‍ಗಳೇ ಇನ್ಮುಂದೆ ನಿಮ್ಮ ಮೇಲೆ ಪೊಲೀಸ್ ಹದ್ದಿನ ಕಣ್ಣು ಇಟ್ಟಿರುತ್ತಾರೆ ಎಚ್ಚರಾ..! ಅಪ್ಪಿ ತಪ್ಪಿ ನೀವೇನಾದ್ರೂ ಬೆಂಗಳೂರು ನಗರದ ಜನ ನಿಬಿಡ ಸ್ಥಳಗಳಲ್ಲೋ.. ಅಥವಾ ಹೊರ ವಲಯಗಳಲ್ಲಿ ಬೈಕ್ ಸ್ಟಂಟ್ ಮಾಡೋದನ್ನ ಪೊಲೀಸರ ಗಮನಕ್ಕೆ ಬಂದ್ರೆ ನಿಮ್ಮ ಕಥೆ ಮುಗೀತು ಅನ್ಕೊಳ್ಳಿ…!
ಹೌದು.. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬೈಕ್ ರೈಡರ್ ಪುಂಡರ ಉಪಟಳ ಹೆಚ್ಚಾಗಿದ್ದು, ಎಲ್ಲಿ ಬೇಕೆಂದರಲ್ಲಿ ಬೈಕ್‍ನಲ್ಲಿ ಸ್ಟೆಂಟ್ ಪ್ರದರ್ಶನ ಮಾಡಿ ಜನರಲ್ಲಿ ಭಯ ಭೀತಿಯನ್ನು ತರುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ಯುವಕರು ಬೈಕನ್ನು ವಿವಿಧ ಭಂಗಿಯಲ್ಲಿ ರೈಡ್ ಮಾಡುತ್ತಾ ಮಜಾ ತಗೋಳ್ತಾ ಇರೋ ಈ ಪುಂಡೈಕ್ಳ ಮೇಲೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಹುಷಾರ್..!
ಬೈಕ್‍ನಲ್ಲಿ ಚಾಲನೆ ಮಾಡುತ್ತಾ ರಸ್ತೆ ಬದಿಯಲ್ಲಿ ಒನ್ ವೀಲ್ ರೈಡ್ ಮಾಡುದ್ರೆ.. ಅಥವಾ ವಿಭೀನ್ನ ಭಂಗಿಯಲ್ಲಿ ಬೈಕ್ ಮೇಲೆ ಕುಳಿತು ಶಕ್ತಿ ಪ್ರದರ್ಶನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದೇ ಆದಲ್ಲಿ, ಐ.ಪಿ.ಸಿ. ಸೆಕ್ಷನ್ 283, 183, 184, ಮತ್ತು 189ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ. ಹಾಗಾಗಿ ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಹೊರ ವಲಯಗಳಲ್ಲಿ ನೀವು ಬೈಕ್ ಸ್ಟಂಟ್ ಮಾಡಿದ್ದೇ ಆದಲ್ಲಿ ನೀವು ಪರಪ್ಪನ ಅಗ್ರಹಾರ ಸೇರಿಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ ಹುಷಾರ್…! ಈ ಕುರಿತು ಬೆಂಗಳೂರು ಪೊಲೀಸರು ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಬೈಕ್ ಸ್ಟಂಟ್‍ನಲ್ಲಿ ತೊಡಗಿದ್ದ ಒಬ್ಬನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Like us on Facebook  The New India Times

POPULAR  STORIES :

ಚಲಿಸುತ್ತಿರುವ ಕಾರಿನಲ್ಲೇ ಯುವತಿಯರ ‘ಕಿಸ್ಸಿಂಗ್ ಕಿಸ್ಸಿಂಗ್’… ಆರ್.ಟಿ ನಗರದಲ್ಲಿ ಸರಣಿ ಅವಘಡ..!

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

ಗ್ರೀನ್ ಟೀ ಹುಚ್ಚು ನಿಮಗೂ ಇದೆಯಾ?

Share post:

Subscribe

spot_imgspot_img

Popular

More like this
Related

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಬೆಂಗಳೂರು :...

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ!

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ! ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯೆಂದು...