ಸಿದ್ದರಾಮುಲ್ಲಾ ಖಾನ್ ಹೇಳಿಕೆ ವಿಚಾರ ಸಿದ್ದರಾಮಯ್ಯ ಬಗ್ಗೆ ಮಾತನಾಡಿ ಬಿಜೆಪಿ ಪಳ್ಳು ಆಗ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ. ಮಂಡ್ಯದ ಹುಲಿವಾನ ಗ್ರಾಮದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಅವರಿಗೆ ಧರ್ಮ ಹಾಗೂ ಕಮ್ಯೂನಲ್ ಇಶ್ಯೂ ಅದೊಂದೇ ಅಸ್ತ್ರ. ಹಿಂದೂ-ಮುಸ್ಲಿಂ ಬಿಟ್ಟು ಚುನಾವಣೆಗೆ ತೆಗೆದುಕೊಂಡು ಹೋಗಲು ಯಾವುದೇ ವ್ಯಪನ್ ಇಲ್ಲ. ಜನರಿಗೆ ಅರ್ಥವಾಗಿದೆ, ಸಾಮಾನ್ಯ ಜನರಿಗೆ ರೈತರಿಗೆ ಉಪಯೋಗ ಆಗುವಂತಹ ಸ್ಕೀಮ್ ಕೊಡಬೇಕು. ಬಿಜೆಪಿ 3 ವರ್ಷದಲ್ಲಿ ಏನು ಮಾಡೋಕಾಗಿಲ್ಲ. ಹಿಂದೂ-ಮುಸ್ಲಿಂ ಟ್ರಂಪ್ ಕಾರ್ಡ್ ಇಟ್ಕೊಂಡು ರಾಜಕಾರಣ ಮಾಡ್ತಿದ್ದಾರೆ, ಚುನಾವಣೆಯಲ್ಲಿ ಗೊತ್ತಾಗುತ್ತೆ ಅವರ ಬಂಡವಾಳ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಜ್ಯಾತ್ಯಾತೀತ ರಾಷ್ಟ್ರ ಇದು, ಸಿದ್ದರಾಮಯ್ಯ ಅವರ ಗೌರವ ಕಡಿಮೆಯಾಗಲ್ಲ, ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಸಿ.ಟಿ.ರವಿ ಗೌರವ ಕಡಿಮೆಯಾಗುತ್ತೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ, ಅವರ ಬಗ್ಗೆ ಮಾತನಾಡಿ ಇವರು ಪಳ್ಳು ಆಗ್ತಾರೆ ಎಂದ್ರು. ಇನ್ನು ರೌಡಿಗಳು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ವಿಚಾರ, ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಅವರ ಸಂಸ್ಕಾರ ಗೊತ್ತಾಗ್ತಿದೆ, ಸೇರಿಸಿಕೊಳ್ಳಲಿ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ರು.