ಶಿರಸಿಯಲ್ಲಿ ನಡೆದ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಎಂಬ ವಿಚಾರಗೋಷ್ಠಿ ನಡೆದ ವೇದಿಕೆಯನ್ನು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಗೋ ಮೂತ್ರ ಸಿಂಪಡಿಸಿ ಶುದ್ಧ ಮಾಡಿದ್ದಾರೆ.
ಶಿರಸಿಯ ರಾಘವೇಂದ್ರ ಮಠದ ಸಭಾ ಮಠದದ ಸಭಾ ಮಂಟಪದಲ್ಲಿ ‘ ಪ್ರೀತಿ ಪದಗಳ ಪಯಣ’ ಎಂಬ ಸಮಿತಿ ವಿಚಾರಗೋಷ್ಠಿ ಹಮ್ಮಿಕೊಂಡಿತ್ತು. ಈ ಗೋಷ್ಠಿಯನ್ನು ನಟ ಪ್ರಕಾಶ್ ರೈ ಅವರು ಉದ್ಘಾಟಿಸಿದ್ದರು. ಈ ಹಿನ್ನೆಲೆಯಲ್ಲಿ ವೇದಿಕೆಯನ್ನು ಶುದ್ಧ ಮಾಡಿದೆ.
ಸ್ವಯಂ ಘೊಷಿತ ಬುದ್ಧಿಜೀವಿಗಳು, ಸೋಗಲಾಡಿ, ಎಡಬಿಡಂಗಿಗಳು ಕಾರ್ಯಕ್ರಮ ಮಾಡಿ ಧಾರ್ಮಿಕ ಕ್ಷೇತ್ರವನ್ನು ಅಪವಿತ್ರ ಮಾಡಿದ್ದಾರೆ. ಆದ್ದರಿಂದ ವೇದಿಕೆಯನ್ನು ಗೋ ಮೂತ್ರ ಸಿಂಪಡಿಸಿ ಶುದ್ಧ ಮಾಡಿದ್ದೇವೆ ಎಂದು ಯುವ ಮೋರ್ಚಾ ಘಟಕದ ಅಧ್ಯಕ್ಷ ವಿಶಾಲ್ ಮರಾಠೆ ಹೇಳಿದ್ದಾರೆ.