ಬಿಜೆಪಿಯ 30 ಶಾಸಕರು ಜೆಡಿಎಸ್ ಸೇರಲಿದ್ದಾರೆಯೇ? ಸದ್ಯ ಇಂತಹದ್ದೊಂದು ಚರ್ಚೆ ಜೋರಾಗಿ ನಡೆಯುತ್ತಿದೆ. ಹಾಗೇ ಜೆಡಿಎಸ್ ಕಡೆ ಒಲವಿರುವ ಆ ಶಾಸಕರು ಯಾರು? ಎಂಬುದ ಕುರಿತು ಗುಸು ಗುಸು ಪಿಸುಪಿಸು ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಕಾರಣ ಲೋಕೋಪಯೋಗಿ ಸಚಿವ ಎಚ್ .ಡಿ ರೇವಣ್ಣ ಅವರು ಸಿಡಿಸಿರುವ ಬಾಂಬ್…!
ಬಿಜೆಪಿಯವರು ಆಪರೇಷನ್ ಕಮಲ ಮಾಡ್ತಿದ್ದಾರೋ ಇಲ್ಲವೋ ಗೊತ್ತಿಲ್ಲ.ಆದರೆ, ಬಿಜೆಪಿಯ 30ಶಾಸಕರು ಜೆಡಿಎಸ್ ಗೆ ಬರಲು ಸಿದ್ಧರಾಗಿದ್ದಾರೆ.
ಯಡಿಯೂರಪ್ಪನವರ ಆರೋಗ್ಯದ ದೃಷ್ಟಿಯಿಂದ ಅವರ ಮನಸ್ಸಿಗೆ ನೋವು ಉಂಟು ಮಾಡಬಾರದೆಂದು ತಡೆ ಹಿಡಿಯಲಾಗಿದೆ ಎಂದ ರೇವಣ್ಣ, ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರಿಗೆ ಒಳ್ಳೆಯ ಗಿಫ್ಟ್ ಕೊಡುತ್ತೇವೆ, ಕಾದು ನೋಡಿರಿ ಎಂದು ರೇವಣ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.