ಆತ್ಮಸ್ಥೈರ್ಯಕ್ಕಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ ಅನ್ನೋದನ್ನ ಇಂತಹ ಮಹಾನ್ ವ್ಯಕ್ತಿಗಳು ಪ್ರೂವ್ ಮಾಡ್ತಾನೆ ಇರ್ತಾರೆ.. ಎಲ್ಲ ಇದ್ದು ಏನು ಮಾಡದ ಜನಗಳ ನಡುವೆ, ಕಣ್ಣುಗಳೆ ಇಲ್ಲದೆ, ಅದೆಷ್ಟೋ ಜೀವಕ್ಕೆ ಕಣ್ಣಾದ ಶ್ರೀಕಾಂತ್ ಬೊಲ್ಲನಂತಹವರು ಎಂದಿಗೂ ಮಾದರಿಯಾಗಿ ನಿಲ್ತಾರೆ.. ಶ್ರೀಕಾಂತ್ ಬೊಲ್ಲ ತಾನು ಮಾಡದ ತಪ್ಪಿಗೆ ಹುಟ್ಟಿನಿಂದಲೇ ದೃಷ್ಟಿಕಳೆದುಕೊಂಡು ಬೆಳೆದಾತ.. ಹುಟ್ಟಿದ್ದು ಆಂದ್ರದಲ್ಲಿನ ಪುಟ್ಟ ಹಳ್ಳಿಯಲ್ಲಿ… ನೆರೆಹೊರೆಯರೆ ಈ ಮಗು ನಿಮಗೆ ಹೊರೆ ಆಗುತ್ತೆ ಅಂತಾ ಹೇಳ್ತಿದ್ರಂತೆ.. ಆದ್ರೆ ಈತನ ಪೋಷಕರು ಈತನನ್ನ ವಿದ್ಯಾವಂತನಾಗಿ ಬದಲಾಯಿಸಿದ್ದಾರೆ.. ತನ್ನ ಮನೆಯವರ ಸಾಥ್ ನಿಂದ 23ವರ್ಷಗಳ ನಂತರ ಶ್ರೀಕಾಂತ್ ಹೈದ್ರಾಬಾದ್ ನ 50 ಕೋಟಿ ವಹಿವಾಟು ಮಾಡೋ ಕಂಪನಿಗೆ ಸಿಇಓ ಆಗಿದ್ಧಾರೆ..
ಅಷ್ಟೇ ಅಲ್ಲ ತನ್ನಂತಹ ಅಂದರಿಗೆ ತಾನೇ ಕಣ್ಣಾಗಿ ನಿಂತಿದ್ದಾರೆ.. ಇವ್ರ ಕಂಪನಿಯಲ್ಲಿ ಕಣ್ಣಿಲ್ಲದವರೇ ಪರಿಸರ ಸ್ನೇಹಿ disposable consumer packaging solutionsನಲ್ಲಿ ಕಾರ್ಯ ನಿರ್ವಹಿಸ್ತಾ ಇದ್ದಾರೆ.. ಬಾಲ್ಯದಲ್ಲೇ ಎಲ್ಲರ ಹಾಗೆ ತನ್ನ ವಿದ್ಯಾಬ್ಯಾಸವನ್ನ ಶುರು ಮಾಡಿದ್ರು, ಅಲ್ಲೂ ಸಿಕ್ಕಿದ್ದು ಅವಮಾನವೆ.. ಆನಂತರ ತನ್ನ ಶಿಕ್ಷಣವನ್ನ ಹೆಚ್ಚು ಇಷ್ಟಪಟ್ಟು ಸ್ಕೂಲ್ ಗೆ ಟಾಪರ್ ಆಗ್ತಾರೆ.. ಎಸ್ಎಸ್ಎಲ್ಸಿಯಲ್ಲಿ 90% ಅಂಕ ತಗೊತಾರೆ.. ನಂತರ ಪಿಯು ಮಗಿಸಿ ಐಐಟಿಗೆ ಅರ್ಜಿ ಹಾಕಿ ಇಂಜಿನಿಯರ್ ಆಗೋಕೆ ಬಯಸ್ತಾರೆ.. ಬಟ್ ದೃಷ್ಟಿಯಿಲ್ಲ ಅನ್ನೋ ಒಂದೇ ಕಾರಣಕ್ಕೆ ಇವ್ರ ಅಪ್ಲಿಕೇಷನ್ ರಿಜೆಕ್ಟ್ ಆಗುತ್ತೆ.. ಹೀಗೆ ರಿಜೆಕ್ಟ್ ಆಗಿದ್ದೆ ಶ್ರೀಕಾಂತ್ ಬಾಳಲ್ಲಿ ಹೊಸದೊಂದು ದಾರಿ ಸಿಗೋಕೆ ಕಾರಣವಾಗುತ್ತೆ.. ಅರ್ಜಿ ರಿಜೆಕ್ಟ್ ಆಯ್ತು ಅಂತಾ ಮೂಲೆ ಸೇರದೆ ಹಲವಾರು ಯುವ ಜನರಿಗೆ ಶಿಕ್ಷಣ ಮಹತ್ವ ಸಾರೋ ಕೆಲವು ಪ್ರಾಜೆಕ್ಟ್ ಗಳಲ್ಲಿ ವರ್ಕ್ ಮಾಡೋಕೆ ಶುರು ಮಾಡ್ತಾರೆ.. ಅದು ಕೂಡ ದಿವಂಗತ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವ್ರ ಜೊತೆಗೆ ಅಂದ್ರೇ ನೀವೂ ನಂಬ್ಲೇಬೇಕು..
ಶ್ರೀಕಾಂತ್ ಐಐಟಿಯಿಂದ ತಿರಸ್ಕಾರಕ್ಕೊಳಗಾದ್ರು ತನ್ನಲಿರೋ ಪ್ರತಿಭೆಯಿಂದ ಫಾರಿನ್ ಯೂನಿವರ್ಸಿಟಿಗಳಿಂದ ಪ್ರಶಂಸೆಗೆ ಒಳಗಾರ್ತಾರೆ.. ಇದಿಷ್ಟೇ ಅಲ್ಲ ನಿಮಗೆ ಅಚ್ಚರಿ ಅನ್ನಿಸಿದ್ರು ಮತ್ತೊಂದು ಸತ್ಯವನ್ನ ಹೇಳ್ತೀವಿ ಕೇಳಿ..? ಶ್ರೀಕಾಂತ್ ಮೊದಲ ಅಂತರರಾಷ್ಟ್ರೀಯ ಅಂದ ವಿದ್ಯಾರ್ಥಿಯಾಗಿ ಅಮೇರಿಕಾದ Massachusetts Institute of Technology (MIT) ಯಲ್ಲಿ ಅಡ್ಮಿಷನ್ ಪಡಿತಾರೆ.. ಅಲ್ಲಿರೋವಾಗಲೆ ತನ್ನ ತಾಯ್ನಾಡಿನಲ್ಲಿರೋ ತನ್ನಂತಹ ದೃಷ್ಟಿ ಇಲ್ಲದವರ ಕನಸುಗಳನ್ನ ಈಡೇರಿಸೋ ಕನಸು ಕಣ್ತಾರೆ.. ಅದನ್ನ ನನಸು ಕೂಡ ಮಾಡ್ತಾರೆ..!
3000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡ್ತಾರೆ.. ಶಿಕ್ಷಣ ಪಡೆದವರು ಮುಂದಿನ ಜೀವನವೇನು ಅನ್ನೋ ಯೋಚನೆ ಸಹ ಶ್ರೀಕಾಂತ್ ಅವರನ್ನ ಕಾಡೋಕೆ ಶುರು ಮಾಡುತ್ತೆ.. ಆಗ ಶುರುವಾಗಿದ್ದೆ ಈ ಕಂಪನಿ.. ಸದ್ಯಕ್ಕೆ 150 ಹೆಚ್ಚು ವಿಕಲಚೇತನರಿಗೆ ಶ್ರೀಕಾಂತ್ ಕೆಲಸವನ್ನ ನೀಡಿದ್ದಾರೆ.. ಕಣ್ಣಿದ್ದು ಕಾಣದೆ ನಡೆಯೋ ಜನರ ನಡುವೆ ಕಣ್ಣಿಲ್ಲದೆ ಬೇರೆಯವರ ಬಾಳಿನಲ್ಲಿ ಕಣ್ಣಾದ ಶ್ರೀಕಾಂತ್ ನಂತಹವರು ಮಾದರಿಯಾಗಿ ನಿಲ್ತಾರೆ.. ಸೋಲನ್ನ ಗೆಲುವಿನ ಮೊದಲ ಅಡಿಪಾಯದ ಕಲ್ಲಾಗಿಸಿ ಅದರ ಮೇಲೆ ಗೆಲುವಿನ ಮೆಟ್ಟಿಲನ್ನ ರೂಪಿಸಿರೋ ಶ್ರೀಕಾಂತ್ ಇನ್ನೂ ದೊಡ್ಡ ಮಟ್ಟಿಗೆ ಬೆಳೆಯಲಿ..
- ಅಶೋಕ್
POPULAR STORIES :
ಎಲ್ಲಾದ್ರೂ ಹುಡುಗಿ ವಿದ್ಯುತ್ ಕಂಬ ಹತ್ತೋದು ನೋಡಿದಿರಾ…? #Video
ಆಶಿತಾ-ಶಕೀಲ್ ಲವ್ ಸ್ಟೋರಿ..! ಪ್ರೇಮಕ್ಕಿಲ್ಲ ಜಾತಿ-ಧರ್ಮ..!?
ಕತ್ರೀನಾ ಕೈಫ್ ರೇಟು ಹದಿನೈದು ಕೋಟಿ..!? ದೀಪಿಕಾ, ಕಂಗನಾ ಭಯಂಕರ್ ಕಾಸ್ಟ್ಲೀ..!?
ಅದು ತೇಜೋಮಹಲ್ ಅಲ್ಲ, ಶುದ್ಧ ತಾಜ್ ಮಹಲ್..! ತಾಜ್ ಮಹಲ್ ಬಗ್ಗೆ ಗೊತ್ತಿರದ ರಹಸ್ಯಗಳು..!
ಪ್ರಭಾಕರ್ ಸಾವಿಗೆ ಕಾರಣವಾಗಿದ್ದು ಆ ವೈದ್ಯ..!? ಅಮ್ಮನ ಕೈ ತುತ್ತು ತಿನ್ನದೆ ಮಲಗುತ್ತಿರಲಿಲ್ಲ ಈ ಜೀವ..!
ಅಂಗವೈಕಲ್ಯ ಗೆದ್ದ ಮಹಾನ್ ಸಾಧಕ..! ಅವ್ನು ಆತ್ಮಹತ್ಯೆಗೂ ಯತ್ನಿಸಿದ್ದ..!!
ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’