10 ಉಗ್ರರನ್ನು ಕೊಂದು ಸಾವನ್ನಪ್ಪಿದ ವೀರ ಯೋಧ..! ಅಶೋಕ ಚಕ್ರ ಪ್ರಶಸ್ತಿಗೆ ಭಾಜನರಾದ ಲ್ಯಾನ್ಸ್ ನಾಯಕ್

Date:

ಅದು ಕಳೆದ ಸೆಪ್ಟೆಂಬರ್ 2.. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಫ್ರುದಾ ಅರಣ್ಯ ಪ್ರದೇಶದಲ್ಲಿ ಉಗ್ರರ ಸಮೂಹವೊಂದು ಅಡಗಿರುವ ಕುಳಿತಿರುವ ಮಾಹಿತಿ ಭಾರತೀಯ ಸೇನೆಗೆ ಲಭ್ಯವಾಗಿತ್ತು. ತಕ್ಷಣವೇ ಗಡಿ ಭದ್ರತಾ ಪಡೆಯ ಯೋಧರು ಸ್ಥಳಕ್ಕೆ ಧಾವಿಸುತ್ತಾರೆ. ಈ ವೇಳೆ ಉಗ್ರರು ಮತ್ತು ಭಾರತೀಯ ಸೇನೆಯ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯುತ್ತದೆ. ಘಟನೆಯಲ್ಲಿ ಮೂವರು ಸೈನಿಕರು ತೀವ್ರವಾಗಿ ಗಾಯಗೊಂಡು ಅಲ್ಲಿಯೇ ಪ್ರಾಣಾಪಾಯದಲ್ಲಿ ಸಿಲುಕುತ್ತಾರೆ. ಈ ವಿಚಾರ ತಿಳಿದ ಭಾರತೀಯ ಸೇನೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳುವಂತೆ ಲ್ಯಾನ್ಸ್ ನಾಯಕ್ ರೊಬ್ಬರ ನೇತೃತ್ವ ತಂಡಕ್ಕೆ ಸೂಚಿಸುತ್ತಾರೆ.
ಅಧಿಕಾರಿಗಳ ಸೂಚನೆ ಅನ್ವಯ ಘಟನಾ ಸ್ಥಳಕ್ಕೆ ದೌಡಾಯಿಸಿದ ಲ್ಯಾನ್ಸ್ ನಾಯಕ್ ಮೋಹನ್ ನಾಥ್ ಗೋಸ್ವಾಮಿಯವರು, ಉಗ್ರರೊಂದಿಗೆ ಕಾದಾಟಕ್ಕಿಳಿಯುತ್ತಾರೆ. ಸತತ 2 ಗಂಟೆಗಳ ಗುಂಡಿನ ಚಕಮಕಿಯಲ್ಲಿ ಲ್ಯಾನ್ಸ್ ನಾಯಕ್ ಮೋಹನ್ ನಾಥ್ ಗೋಸ್ವಾಮಿಯವರು ಇಬ್ಬರು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಉಗ್ರರು ಹಾರಿಸಿದ 5-6 ಗುಂಡುಗಳು ಲ್ಯಾನ್ಸ್ ನಾಯಕ್ ರ ದೇಹ ಹೊಕ್ಕಿರುತ್ತದೆ. ಆದರೂ ಕೂಡಾ ತಮಗಾದ ಗಂಭೀರ ಗಾಯಗಳನ್ನು ಲೆಕ್ಕಿಸದಮೋಹನ್ ನಾಥ್ ಗೋಸ್ವಾಮಿಯವರು, ಗಾಯಗೊಂಡಿದ್ದ ತಮ್ಮ ಮೂವರು ಸ್ನೇಹಿತರನ್ನು ರಕ್ಷಿಸುತ್ತಾರೆ. ಗಾಯಗೊಂಡ ಸೈನಿಕರು ಬದುಕುಳಿಯುತ್ತಾರೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ಮೋಹನ್ ನಾಥ್ ಗೋಸ್ವಾಮಿಯವರು ಸೇನಾಸ್ಪತ್ರೆಯಲ್ಲಿ ಸಾವನ್ನಪ್ಪುತ್ತಾರೆ. ಮೂಲತಃ ಉತ್ತರಾಖಂಡದವರಾದ ಲ್ಯಾನ್ಸ್ ನಾಯಕ್ ಮೋಹನ್ ನಾಥ್ ಗೋಸ್ವಾಮಿಯವರು, ಪತ್ನಿ ಮತ್ತು 7 ವರ್ಷದ ಮಗಳನ್ನು ಅಗಲುತ್ತಾರೆ.
ಲ್ಯಾನ್ಸ್ ನಾಯಕ್ ಮೋಹನ್ ನಾಥ್ ಗೋಸ್ವಾಮಿಯವರು ಕೇವಲ 11 ದಿನಗಳ ಅಂತರದಲ್ಲಿ ಬರೋಬ್ಬರಿ 10 ಉಗ್ರಗಾಮಿಗಳನ್ನು ಕೊಂದಿದ್ದರು. ಅವರಿಗೆ ಮಂಗಳವಾರ ಅಶೋಕ ಚಕ್ರ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗಿದೆ. ನವದೆಹಲಿಯಲ್ಲಿ ನಡೆದ 67ನೇ ಗಣರಾಜ್ಯೋತ್ಸವ ದಿನಾಚರಣೆಯಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಹುತಾತ್ಮ ಯೋಧ ಲ್ಯಾನ್ಸ್ ನಾಯಕ್ ಮೋಹನ್ ನಾಥ್ ಗೋಸ್ವಾಮಿಯವರ ಪರವಾಗಿ ಪತ್ನಿ ಭಾವನಾ ಗೋಸ್ವಾಮಿ ಅವರು ಅಶೋಕ ಚಕ್ರ ಪದಕ ಸ್ವೀಕರಿಸಿದರು.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

114 ಸ್ವೀಪರ್ ಹುದ್ದೆಗೆ 19000 ಎಂಬಿಎ, ಇಂಜಿನಿಯರ್ ವಿದ್ಯಾರ್ಥಿಗಳಿಂದ ಅರ್ಜಿ..!

ಗೂಗಲ್ ಜೊತೆ ಕೇಂದ್ರ ಸರ್ಕಾರದ ಒಪ್ಪಂದ ಇಂದಿನಿಂದ ರೈಲು ನಿಲ್ದಾಣಗಳಲ್ಲಿ ಫ್ರೀ ವೈಫೈ..!

ಅಪ್ಪ ಕೂಲಿಯಾಳು, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!

ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!

ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...