ಪ್ರತಿಭೆ ಇದ್ರೂ ಅದನ್ನು ಜಗತ್ತಿಗೆ ಪರಿಚಯಿಸಲು ಈ ಸ್ಪಿನ್ ಮಾಂತ್ರಿಕನಿಗೆ ಸಾಧ್ಯವಾಗಲೇ ಇಲ್ಲ. ಆಸ್ಟ್ರೇಲಿಯಾದ ಶೇನ್ ವಾರ್ನ್ ನಿಂದ ಈತ ತನ್ನ ಕ್ರಿಕೆಟ್ ಕೆರಿಯರ್ ನನ್ನೇ ಮುಗಿಸಿಬೇಕಾದ ಅನಿವಾರ್ಯತೆ ಬಂತು. ಈ ಬಾರಿಯ ಐಪಿಎಲ್ನಲ್ಲೂ ಸಖತಾಗಿ ಶೈನ್ ಆಗುತ್ತಿರುವ ಆ ಕ್ರಿಕೆಟ್ಪಟುವಿನ ಹೆಸರು ಬ್ರಾಡ್ ಹಾಗ್. ಸುನೀಲ್ ನರೇನ್ ಅನುಪಸ್ಥಿತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಿಳಿದಿದ್ದ ಬ್ರಾಡ್ ಹಾಗ್ ಡೆಲ್ಲಿ ವಿರುದ್ಧ ಅಮೋಘ ಸ್ಪಿನ್ ದಾಳಿ ನಡೆಸಿದ್ದಾರೆ. ಆಸ್ಟ್ರೇಲಿಯಾದ 45ರ ಹರೆಯದ ಹಾಗ್ ಈಡಾನ್ ಗಾರ್ಡನ್ನಲ್ಲಿ ನಡೆದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ನಡೆಸಿ 3 ವಿಕೆಟ್ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದು, ತನ್ನ ಬೌಲಿಂಗ್ಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
1994ರಲ್ಲಿ ಬ್ರಾಡ್ ಹಾಗ್ ಪ್ರಥಮ ದರ್ಜೆ ಕ್ರಿಕೆಟ್ ಗೆ ಕಾಲಿಟ್ಟರು. ಹಾಗ್ ಪಾದಾರ್ಪಣೆ ಮಾಡಿದಾಗ ಭಾರತ ಸಂಜು ಸ್ಯಾಮ್ಸನ್ ಹುಟ್ಟಿರಲಿಲ್ಲ. ಅಂದು ಸ್ಟಾರ್ ಸ್ಪಿನ್ ಬೌಲರ್ ಆಗಿದ್ದ ಶೇನ್ ವಾರ್ನ್, ಆಸ್ಟ್ರೇಲಿಯಾದ ಟ್ರಂಪ್ ಕಾರ್ಡ್ ಆಗಿದ್ರು. ಹೀಗಾಗಿ ವಾರ್ನ್ ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೆಚ್ಚಿನ ಅವಕಾಶ ಸಿಗದೇ ತೆರೆಮರೆಯಲ್ಲೇ ತನ್ನ ಆಟವನ್ನು ತೋರಿಸಬೇಕಾಯ್ತು. ಕೆಲವೊಮ್ಮೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೂ ವಾರ್ನ್ ಅಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಕೇವಲ 7 ಟೆಸ್ಟ್ ಹಾಗೂ 123 ಏಕದಿನ ಪಂದ್ಯಗಳನ್ನು ಆಡಿ 2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾದ್ರು.
ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ಬೈ ಹೇಳಿದ ನಂತರ ಚುಟುಕು ಕ್ರಿಕೆಟ್ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದ್ರು. ಈ ಬಾರಿಯ ಐಪಿಎಲ್ನಲ್ಲಿ ಅಮೋಘ ಸ್ಪಿನ್ ದಾಳಿ ನಡೆಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಳೆದ ವರ್ಷದ ಐಪಿಎಲ್ ಸೀಸನ್ನಲ್ಲೂ ಸುನೀಲ್ ನರೇನ್ ಅಕ್ರಮ ಬೌಲಿಂಗ್ ಶೈಲಿಯಿಂದ ಟೂರ್ನಿಯಿಂದ ಹೊರಗುಳಿದಿದ್ರು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅಮೋಘ ಸ್ಪಿನ್ ದಾಳಿ ನಡೆಸಿದ್ದರು. ಒಟ್ನಲ್ಲಿ, ತನ್ನ 45ನೇ ವಯಸ್ಸಿನಲ್ಲೂ ಅಮೋಘ ಆಟವಾಡುತ್ತಿರುವ ಬ್ರಾಡ್ ಹಾಗ್ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಈ ಯಶಸ್ಸಿನ ಹಿಂದೆ ಅವರ ಆತ್ಮವಿಶ್ವಾಸದ ಜೊತೆಯಲ್ಲಿ ಕಠಿಣ ಅಭ್ಯಾಸವೂ ಇರುವುದು ವಿಶೇಷ. ಆಟಕ್ಕೆ ವಯಸ್ಸಿನ ಮಿತಿಯಿಲ್ಲ. ಯಾವುದೇ ವಯಸ್ಸಿನಲ್ಲೂ ಆಟವಾಡಬಹುದು ಅನ್ನೋದನ್ನು ಬ್ರಾಡ್ ಹಾಗ್ ತೋರಿಸಿಕೊಟ್ಟಿದ್ದಾರೆ.
- ರಾ ಚಿಂತನ್
POPULAR STORIES :
ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲು ಲೈಸೈನ್ಸ್ ಪಡೆಯಬೇಕಂತೆ..!!!
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,
ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!
ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?