ಹಣ ಇಲ್ಲದ ಕಾರಣಕ್ಕೆ ಅಂಬುಲೆನ್ಸ್ ಸೇವೆ ಪಡೆದುಕೊಳ್ಳಲಾಗದೇ ಪತ್ನಿಯ ಶವವನ್ನು ಪತಿ ಸುಮಾರು 10 ಕಿ.ಮೀ ವರೆಗೆ ನಡೆದುಕೊಂಡೇ ಸಾಗಿದ ಹೃದಯ ವಿದ್ರಾವಕ ಘಟನೆ ನೆನ್ನೆ ತಾನೆ ನಡೆದಿದೆ. ಇದೀಗ ಅದೇ ರೀತಿಯ ಹೃದಯ ಕಲುಕುವ ಮತ್ತೊಂದು ವಿಡಿಯೋ ಬಹಿರಂಗವಾಗಿದ್ದು ಅದನ್ನು ನೋಡಿದ ಜನ ದಿಗ್ಭ್ರಮೆಗೊಂಡಿದ್ದಾರೆ.
ಈ ವಿಡಿಯೋದಲ್ಲಿ ಆಸ್ಪತ್ರೆಯ ಸಿಬ್ಬಂದಿಯೊಬ್ಬ ರೈಲು ಬಡಿದು ಮೃತ ಪಟ್ಟ 70 ವರ್ಷದ ಮಹಿಳೆಯ ಶವದ ಮೂಳೆಯನ್ನು ತನ್ನ ಕಾಲಿನ ಸಹಾಯದಿಂದ ಮುರಿದು ಅದನ್ನು ಪ್ಲಾಸ್ಟಿಕ್ ಮೂಟೆಯಲ್ಲಿ ಕಟ್ಟಿ ಕೊಂಡೊಯ್ಯುವುದನ್ನು ಚಿತ್ರಿಸಿದ್ದಾರೆ.
ಅವರು ಈ ರೀತಿ ಮಾಡಲು ಕಾರಣ ಕೇಳಿದರೆ ಇನ್ನೂ ಶಾಕ್ ಆಗೋದಂತೂ ಖಂಡಿತ. ಸಲಬಣಿ ಬಾರಿಕ್ ಎಂಬ 76 ವರ್ಷದ ವಿಧವೆ ಹೆಂಗಸು ರೈಲು ಬಡಿದು ಸಾವನ್ನಪ್ಪಿದ್ದಳು. ಆದರೆ ಆ ಊರಿನಲ್ಲಿ ಯಾಯುದೇ ಸರ್ಕಾರಿ ಆಸ್ಪತ್ರೆ ಇರಲಿಲ್ಲ. ಆದ್ದರಿಂದ ಆಕೆಯ ಶವವನ್ನು ಬಲಸೋರ್ ಜಿಲ್ಲೆಯ ಸೋರೋ ಗ್ರಾಮದಲ್ಲಿನ ಒಂದು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿತ್ತು. ಆದರೆ ಅಲ್ಲಿ ಫೋಸ್ಟ್ ಮಾಟಮ್ ಸೇವೆ ಇಲ್ಲದೇ ಇರುವ ಕಾರಣ ಆ ಮೃತ ದೇಹವನ್ನು 30 ಕಿ.ಮೀ ದೂರದ ಪಟ್ಟಣಕ್ಕೆ ಕೊಂಡೊಯ್ಯಲು ರೈಲ್ವೇ ಪೊಲೀಸರು ನಿರ್ಧರಿಸಿದ್ದರು. ಆದರೆ ಆ ಆರೋಗ್ಯ ಕೇಂದ್ರದಲ್ಲಿ ಒಂದು ಆಂಬುಲೆನ್ಸ್ ಸೇವೆಯೂ ಸಹ ಇರಲಿಲ್ಲ. ಮೇಲಾಗಿ ಆಟೋದಲ್ಲಿ ಕೊಂಡೊಯ್ದರೆ ದುಬಾರಿ ಹಣ ಕೀಳುತ್ತಾರೆ ಎಂಬ ಕಾರಣದಿಂದಾಗಿ ಪೊಲೀಸರು ಮೃತ ದೇಹವನ್ನು ರೈಲಿನ ಮೂಲಕ ಸಾಗಿಸಲು ಮುಂದಾಗಿದ್ದಾರೆ. ದೇಹವನ್ನು ಸುಮಾರು ಎರಡು ಕಿ.ಮೀ ಸಾಗಿಸಲು ಸರಳವಾಗಲಿ ಎಂಬ ಕಾರಣಕ್ಕೆ ಆಸ್ಪತ್ರೆಯ ಸ್ವೀಪರ್ ಮೃತ ದೇಹದ ಮೂಳೆ ಮುರಿದು, ಅದನ್ನು ಒಂದು ಚೀಲದಲ್ಲಿ ಸುತ್ತಿ ಕಟ್ಟಿ ಕೋಲಿಗೆ ಕಟ್ಟಿಕೊಂಡು ಸಾಗಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಒಡಿಶಾದ ಮಾನವ ಹಕ್ಕುಗಳ ಆಯೋಗ ಈ ಕುರಿತು ವಿವರಣೆ ನೀಡುವಂತೆ ರೈಲ್ವೇ ಪೊಲೀಸರಿಗೆ ತಿಳಿಸಿದ್ದಾರೆ.
https://www.youtube.com/watch?v=PXqcJ9Yn-ns
POPULAR STORIES :
ಪತ್ನಿಯ ಮೃತ ದೇಹ ಹೊತ್ತು 10ಕಿ.ಮೀ ನಡೆದ..!
ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?
ಚೈನೀಸ್ ಕಂಪನಿಗೆ ಸ್ಟಾರ್ಟ್ ಅಪ್ ಕಂಪನಿನ 6,000 ಕೋಟಿಗೆ ಮಾರಿ ಬಿಟ್ರಂತೆ ಮುಂಬಯಿ ಬ್ರದರ್ಸ್…!
ಪೊಲೀಸಪ್ಪನ ದೌರ್ಜನ್ಯ… ನೀವೂ ಸ್ವಲ್ಪ ನೋಡಿ..!
ಆಹಾರವನ್ನು ಕೈಯಲ್ಲೇ ಸೇವಿಸುವುದು ಉತ್ತಮ ಯಾಕೆ???
ಸರ್ಕಾರಿ ಹುದ್ದೆಗೆ ಜಸ್ಟ್ ಪಾಸಾದ್ರೆ ಸಾಕು..!
ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..