ಭಾರತೀಯ ಸಂಪರ್ಕ ಕ್ಷೇತ್ರದಲ್ಲಿ ಇದೀಗ ಭಾರೀ ಸಂಚಲನ ಮೂಡಿಸಿದ್ದ ರಿಲಯನ್ಸ್ ಜಿಯೋ ಸಿಮ್‍ಗೆ ಇತರೆ ಸಂಸ್ಥೆಗಳು ಪೈಪೋಟಿ ನೀಡಲು ಸಿದ್ಧತೆ ನಡೆಸಿವೆ. ಎಲ್ಲಾ ಕಂಪನಿಗಳು ದರ ಸಮರವನ್ನು ಎದುರಿಸಲು ಸಜ್ಜಾಗಿದೆ. ಈ ಹಿನ್ನಲೆಯಲ್ಲಿ ಭಾರತೀಯ ಸಂಚಾರ ನಿಗಮ್(ಬಿಎಸ್‍ಎನ್‍ಎಲ್) ನೊಂದಿಗೆ ಜಿಯೋ ಒಪ್ಪಂದ ಮಾಡಿಕೊಳ್ಳಲು ಮುಂದಾಗಿವೆ. ರಿಲಯಾನ್ಸ್ ಮತ್ತು ಬಿಎಸ್‍ಎನ್‍ಎಲ್ ಬಳಕೆದಾರರ ಅನುಕೂಲತೆಯ ದೃಷ್ಠಿಯಿಂದ ಈ ಎರಡೂ ಸಂಸ್ಥೆಗಳು ಒಪ್ಪಂದ ಮಾಡಿಕೊಳ್ಳಲಿದ್ದು, ರೋಮಿಂಗ್ ವೇಳೆ ಕಾಲಿಂಗ್ ಸೇವೆಯ ಕುರಿತಾಗಿ ಒಪ್ಪಂದ ಮಾಡಿಕೊಳ್ಳಲಿದೆ ಎಂದು ತಿಳಿದು ಬಂದಿದೆ. ಬಿಎಸ್‍ಎನ್‍ಎಲ್ ಗ್ರಾಹಕರು ರೋಮಿಂಗ್ ಸಂದರ್ಭದಲ್ಲಿ ಜಿಯೋ 4ಜಿ ಇಂಟರ್‍ನೆಟ್ ಸೌಲಭ್ಯವನ್ನು ಪಡೆಯಬಹುದಾಗಿದೆ. ಅದೇ ರೀತಿಯಾಗಿ ರಿಲಯಾನ್ಸ್ ಜಿಯೋ ಬಳಕೆದಾರರು ನೆಟ್‍ವರ್ಕ್ ಇಲ್ಲದ ಸ್ಥಳಗಳಲ್ಲಿ ಬಿಎಸ್‍ಎನ್‍ಎಲ್ 2 ಜಿ ಸೇವೆಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಜಿಯೋ ಗ್ರಾಹಕರು ನೆಟ್‍ವರ್ಕ್ ಇಲ್ಲದ ಕಡೆಗಳಲ್ಲಿ ವಾಯ್ಸ್‍ಕಾಲ್‍ಗಾಗಿ ಬಿಎಸ್‍ಎನ್‍ಎಲ್ 2 ಜಿ ಸೇವೆಯನ್ನು ಪಡೆಯಬಹುದಾಗಿದ್ದು, ಈ ಕುರಿತಂತೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
POPULAR STORIES :
ಪ್ಯಾರಾಲಿಂಪಿಕ್‍ನಲ್ಲಿ ಭಾರತಕ್ಕೆ ಬೆಳ್ಳಿಯ ಬೆಳಕು ನೀಡಿದ ದೀಪಾ..
ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..
ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!
ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…