ಬಸ್ ತಂಗುದಾಣದ 2 ಚಿಕ್ಕ ಗೋಪುರಗಳ ತೆರವು

Date:

ಅರಮನೆ ನಗರಿ ಮೈಸೂರಲ್ಲಿ ಭಾರೀ ವಿವಾದಕ್ಕೀಡಾಡಿದ್ದ ಗುಂಬಜ್ ಮಾದರಿ ಬಸ್ ತಂಗುದಾಣದ 2 ಚಿಕ್ಕ ಗೋಪುರಗಳನ್ನ ತೆರವು ಮಾಡಲಾಗಿದೆ. ಮೈಸೂರು-ಊಟಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಬಸ್ ತಂಗುದಾಣ ಮೇಲಿದ್ದ 2 ಗೋಪುರದ ಕುರುಹು ಇಲ್ಲದಂತೆ ಮಾಡಲಾಗಿದೆ.

ಗುಂಬಜ್ ಮಾದರಿ ನಿರ್ಮಿಸಲಾಗಿದ್ದು, ಕೂಡಲೇ ತಂಗುದಾಣ ತೆರವು ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ಪಟ್ಟು ಹಿಡಿದಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ ಶಾಸಕ ರಾಮದಾಸ್, ಇದು ಗುಂಬಸ್ ಮಾದರಿ ಅಲ್ಲ ಎಂದು ಟಾಂಗ್ ನೀಡಿದ್ದರು.

 

ಈ ಮಧ್ಯೆ ತಂಗುದಾಣ ತೆರವಿಗೆ ಮೈಸೂರು ಪಾಲಿಕೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೋಟಿಸ್ ನೀಡಿತ್ತು. ಉಭಯ ನಾಯಕ ಮಧ್ಯೆ ವಾಗ್ಯುದ್ಧ ನಡೆಯುತ್ತಿದ್ದ ಬೆನ್ನಲ್ಲೇ ಈ ಬಗ್ಗೆ ವಿವಾದ, ಚರ್ಚೆ ಮಾಡದಂತೆ BJP ಹೈಕಮಾಂಡ್ ಬ್ರೇಕ್ ಹಾಕಿತ್ತು. ಇದೆಲ್ಲದರ ಮಧ್ಯೆ ರಾತ್ರೋರಾತ್ರಿ ತಂಗುದಾಣದ ಮೇಲಿದ್ದ 2 ಗೋಪುರ ತೆರವು ಮಾಡಲಾಗಿದೆ. ಜೊತೆಗೆ ನನಗೆ ವಿವಾದಕ್ಕಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯ ಎಂದು ಶಾಸಕ S.A.ರಾಮದಾಸ್ ಸ್ಪಷ್ಟನೆ ನೀಡಿ ಪ್ರಕಟಣೆ ಹೊರಡಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...