ಪೆಟ್ರೋಲ್ , ಡಿಸೇಲ್ ಬೆಲೆ ಏರಿಕೆ ಖಂಡಿಸಿ ಸೆ.10 (ಸೋಮವಾರ) ಕರೆ ನೀಡಲಾಗಿರುವ ಬಂದ್ ಗೆ ನಾನಾ ಸಂಘಟನೆಗಳು ಬೆಂಬಲ ಸೂಚಿಸಿವೆ.
ಆಲ್ ಇಂಡಿಯಾ ಟ್ರೇಡ್ ಯೂನಿಯನ್ (ಎಐಟಿಯುಸಿ), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ( ಸಿಐಟಿಯು) ಬೆಂಬಲ ನೀಡಿವೆ. ಕೆಎಸ್ ಆರ್ ಟಿಸಿ, ಬಿಎಂಟಿಸಿ ಸಂಚಾರ ಅನುಮಾನವಾಗಿದೆ. ಖಾಸಗಿ ಬಸ್ ಗಳು ಪರೋಕ್ಷ ಬಂದ್ ಗೆ ಬೆಂಬಲ ನೀಡಿವೆ. ಆದರೆ, ಬಸ್ ಸಂಚಾರದ ಬಗ್ಗೆ ಮಾಲೀಕರು ನಿರ್ಧಾರ ಮಾಡಿಲ್ಲ.
ಮೆಟ್ರೋ ಸೇವೆ ಬಗ್ಗೆ ಸ್ಪಷ್ಟವಾಗಿಲ್ಲ.ಆಟೋ ಸಂಘಟನೆಗಳು ಬೆಂಬಲ ನೀಡಿವೆ. ಓಲಾ, ಊಬರ್ ಟ್ಯಾಕ್ಸಿ ಮಾಲೀಕರು ಪರೋಕ್ಷ ಬೆಂಬಲ ನೀಡಿದ್ದಾರೆ.
ಲಾರಿ ಮಾಲೀಕರ ಸಂಘದಿಂದ ಬೆಂಬಲ ಸಿಕ್ಕಿಲ್ಲ.