ಆಂಧ್ರಪ್ರದೇಶದ ಮಾಜಿ ಸಚಿವರೊಬ್ಬರು ಕಾಲ್ ಗರ್ಲ್ ಒಬ್ಬಳಿಂದ ವಂಚನೆಗೊಳಗಾಗಿದ್ದಾರೆ ಅನ್ನೋ ಸುದ್ದಿ ಬೆಳಿಗ್ಗೆಯಿಂದ ಹರಿದಾಡುತ್ತಿತ್ತು. ಆದ್ರೆ ಅದು ಮಾಜಿ ಸಚಿವರಲ್ಲ ಮಾಜಿ ಶಾಸಕ ವಸಂತ್ ರಾಜ ರಾಮಸ್ವಾಮಿ ಅನ್ನೋದು ಸ್ಪಷ್ಟವಾಗಿದೆ. ಇಷ್ಟಕ್ಕೂ ಈ ಘಟನೆ ನಡೆದಿರೋದು ಬೆಂಗಳೂರಿನ ಸ್ಟಾರ್ ಹೋಟಲ್ ನಲ್ಲಿ. ತನ್ನ ರಾಸಲೀಲೆಗೆ ಬುಕ್ ಮಾಡ್ಕೊಂಡಿದ್ದ ಕಾಲ್ ಗರ್ಲ್, ಮಾಜಿ ಶಾಸಕರ ಹಣ, ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾಳೆ.
ಏ.25 ರಂದು ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರೋಡ್ ನಲ್ಲಿರೋ ಪ್ರತಿಷ್ಠಿತ ಸ್ಟಾರ್ ಹೋಟೆಲ್‌ವೊಂದರಲ್ಲಿ ತಂಗಿದ್ದ ಆಂಧ್ರಪ್ರದೇಶದ ಮಾಜಿ ಶಾಸಕರೊಬ್ಬರು ಹೈದ್ರಾಬಾದ್ ಮೂಲದ ಕಾಲ್ ಗರ್ಲ್ ಕರೆಸಿಕೊಂಡಿದ್ದರು. ಒಂದಷ್ಟೊತ್ತು ಆಕೆ ಜೊತೆ ಹರಟೆ ಹೊಡೆದ ಶಾಸಕರು ಆಕೆಯ ಇಚ್ಚೆಯಂತೆ ಮಧ್ಯ ತರುವುದಕ್ಕೆ ಹೋಟೆಲ್ ಕೊಠಡಿಯಿಂದ ಹೊರ ಹೋಗಿದ್ದಾರೆ. ಇದೇ ಸಮಯಕ್ಕೆ ಕಾದಿದ್ದ ಆ ಕಾಲ್‌ಗರ್ಲ್, ಶಾಸಕರ ಹಣ, ಚಿನ್ನದ ಸರ, ಐಪ್ಯಾಡ್ ಎಗರಿಸಿ ಪರಾರಿಯಾಗಿದ್ದಾಳೆ.
ಹೋಟೆಲ್ ರೂಂ ಬುಕ್ ಆಗಿದ್ದು ಕೂಡ ಬೇನಾಮಿ ಹೆಸರಲ್ಲಿ. ಭಾರತೀಯ ಮಜ್ದೂರ್ ಕಾಂಗ್ರೆಸ್‌ನ ಚಾಮರಾಜನಗರ ಜಿಲ್ಲಾ ಅಧ್ಯಕ್ಷ ಋತ್ವಿಕ್ ಶೆಟ್ಟಿ ಹೆಸರಲ್ಲಿ ಬುಕ್ ಆಗಿದ್ದ ರೂಂ ಅನ್ನು ರಾಜಾ ಎಂಬುವರು ಬಳಸಿಕೊಳ್ಳಲಿದ್ದಾರೆ ಎಂದೂ ತಿಳಿಸಲಾಗಿತ್ತು.
ಆದರೆ ಈ ಘಟನೆ ನಂತರ ರಾಜಾ ಎಂಬ ಹೆಸರಿನಲ್ಲಿ ಉಳಿದಿದ್ದ ಮಾಜಿ ಶಾಸಕರು ಆಂಧ್ರಪ್ರದೇಶಕ್ಕೆ ವಾಪಸ್ ತೆರಳಿದ್ದು, ಕಳ್ಳತನವಾಗಿರುವ ಬಗ್ಗೆ ಋತ್ವಿಕ್ ಶೆಟ್ಟಿ ಜೀವನ್ ಭೀಮಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಒಟ್ಟಾರೆ ಕಾಲ್ ಗರ್ಲ್ ಸಹವಾಸ ಮಾಡಿ ಇಂಗು ತಿಂದ ಮಂಗನಂತಾಗಿರೋ ಮಾಜಿ ಶಾಸಕನ ಸ್ಥಿತಿ ಇಸ್ಕಂಡೋನ್ ಈರಭದ್ರ… ಕೊಟ್ಟೋನ್ ಕೋಡಂಗಿ ಎನ್ನುವಂತಾಗಿದೆ.
- ಶ್ರೀ
POPULAR STORIES :
ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!
ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ
ಬೇಸಿಗೆ ರ(ಸ) ಜೆ – ಮಕ್ಕಳಿಗೊ? ಪೋಷಕರಿಗೋ ?
ನಾಗರಹಾವಿಗೆ ಎರಡು ಕಾಲು..! ಜನರು ದಂಗುಬಡಿದು ಹೋದರು..!
ನಿಮ್ಮ ಮಗು ಬಳಿ ಸ್ಮಾರ್ಟ್ ಫೋನ್ ಇದೆಯಾ ಹುಷಾರ್..!!
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ






