ಮಂಡ್ಯ ಜಿಲ್ಲೆಯಾದ್ಯಂತ ಕಾವೇರಿ ನೀರು ಹಂಚಿಕೆ ಕುರಿತು ರೈತರು ಅಹೋ ರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ರಾಜ್ಯ ಸರ್ಕಾರ ತಮಿಳುನಾಡಿಗೆ ಮಂಗಳವಾರ ರಾತ್ರಿಯಿಂದಲೇ ನೀರು ಹರಿಸುತ್ತಿರುವುದನ್ನು ಖಂಡಿಸಿ ಕಾವೇರಿ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಮಾಜೀ ಸಂಸದ ಜಿ. ಮಾದೇಗೌಡ ಕಟುವಾಗಿ ಖಂಡಿಸಿದ್ದಾರೆ.
ತಮ್ಮ ಸ್ವ ಗೃಹದಲ್ಲಿ ಸುದ್ದಿಗಾರರ ಕುರಿತು ಮಾತನಾಡಿದ ಅವರು ತಮಿಳುನಾಡಿಗೆ ನೀರು ಬಿಡಲು ಸೂಚನೆ ನೀಡಿರುವ ಸಿಎಂ ಸಿದ್ದರಾಮಯ್ಯ ಈ ಕೂಡಲೇ ರಾಜಿನಾಮೆ ನೀಡಿ ಎಂದು ಹೇಳಿದ್ದಾರೆ. ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ಸಿದ್ದರಾಮಯ್ಯ ಅವರು ಸರ್ವ ಪಕ್ಷ ಸಭೆಯನ್ನು ಕರೆದು ನಿರ್ಧಾರ ಮಾಡುವ ಮೂಲಕ ಬೇಜವಾಬ್ದಾರಿಯಿಂದ ವರ್ತನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದೇ ವೇಳೆ ಕೆಆರ್‍ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿರುವ ಮಾದೇಗೌಡರು, ಮುನ್ನಚ್ಚರಿಕೆ ಕ್ರಮವಾಗಿ ಜಲಾಶಯಕ್ಕೆ ಮಿಲಿಟರಿ ಭದ್ರತೆ ಒದಗಿಸಿದ್ದಾರೆ. ಸರ್ಕಾರ ಏನಾದರೂ ನಮ್ಮನ್ನು ತಡೆಯಲು ಯತ್ನಿಸಿದರೆ ನಮ್ಮದೇ ಸೈನ್ಯ ಕಟ್ಟಿ ತಮಿಳುನಾಡಿಗೆ ನೀರು ಹರಿಸುದನ್ನು ತಡೆಯುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ರೈತರ ಮೇಲೆ ಈ ಬಾರಿಯೂ ಲಾಠಿ ಚಾರ್ಜ್ ಮಾಡಿದರೂ ಜಗ್ಗೋದಿಲ್ಲ, ಕಾವೇರಿ ನೀರು ವಿಚಾರವಾಗಿ ಹಲವು ಬಾರಿ ಜೈಲು ಕಂಡಿದ್ದೇವೆ. ಈ ಬಾರಿ ಸರ್ಕಾರದ ಲಾಠಿ ರುಚಿಗೂ, ಜೈಲುವಾಸಕ್ಕೂ ಹೆದರುವುದಿಲ್ಲ, ಕಾವೇರಿ ನೀರಿಗಾಗಿ ನಾವು ಎಲ್ಲದಕ್ಕೂ ಸಿದ್ದವಾಗಿ ನಿಂತಿದ್ದೇವೆ ಎಂದರು.
ಬೆಂಗಳೂರಿಗರೇ ಹೋರಾಟಕ್ಕೆ ಬೆಂಬಲ ನೀಡದಿದ್ದರೆ ಎಚ್ಚರ..!
ಇನ್ನು ಕಾವೇರು ನೀರು ವಿಚಾರವಾಗಿ ರೈತ ಹೋರಾಟಕ್ಕೆ ಬೆಂಗಳೂರಿನ ಜನರ ವಿರುದ್ದ ಕಿಡಿ ಕಾರಿದ ಮಾದೇಗೌಡರು ಈ ಬಾರಿ ರೈತರ ಹೋರಾಟಕ್ಕೆ ಬೆಂಗಳೂರಿನ ಜನರು ಬೆಂಬಲ ನೀಡದಿದ್ದರೆ, ಬೆಂಗಳೂರಿಗೆ ಬರುವ ನೀರನ್ನೂ ಸ್ಥಗಿತಗೊಳಿಸಲಾಗುವುದು ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ.
POPULAR STORIES :
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!
ಸೆಪ್ಟೆಂಬರ್ 9ಕ್ಕೆ ಕರ್ನಾಟಕ ಬಂದ್‍ಗೆ ಕರೆ
ಮುಸ್ಲೀಂ ಮಕ್ಕಳಿಗೆ ಕುರಾನ್ ಹೇಳಿ ಕೊಡ್ತಾಳೆ ಈ ಹಿಂದು ಯುವತಿ..!
ತಮಿಳುನಾಡಿಗೆ ಕಾವೇರಿ ನೀರು: ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ.
ದೇಹದಲ್ಲಿರೋ ವಿಟಮಿನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ..??
ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?