ಕಾವೇರಿ ಜಲಾಶಯದಲ್ಲಿ ಉಳಿದಿರೋದು ಕೇವಲ 25 ಟಿಎಂಸಿ ನೀರು..!

Date:

ಕಾವೇರಿ ನೀರನ್ನು ತಮಿಳುನಾಡಿಗೆ ಸುಪ್ರೀಂ ಆದೇಶದ ಮೇರೆಗೆ ನಿರಂತರವಾಗಿ ನೀರು ಹರಿಸುತ್ತಿರುವ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ನೀರಿಗಾಗಿ ತೀವ್ರತರವಾದ ತೊಂದರೆಯನ್ನು ಅನುಭವಿಸಲು ಸಿದ್ದರಿರಬೇಕಾಗುತ್ತದೆ. ಅ.4 ರಂದು ಸುಪ್ರೀಂಕೋರ್ಟ್ ನೀಡಿದ್ದ ಆದೇಶದಂತೆ ಅ.1 ರಿಂದ 6ರ ವರೆಗೆ 3.1 ಟಿಎಂಸಿ ನೀರು ತಮಿಳುನಾಡಿಗೆ ಹರಿಬಿಡಲಾಗಿದ್ದು, ಬಳಿಕ ಅ.7ರಿಂದ ಪ್ರತಿದಿನ 2 ಸಾವಿರ ಕ್ಯೂಸೆಕ್ಸ್ ಲೆಕ್ಕಾಚಾರದಂತೆ ನೀರು ಹರಿ ಬಿಡಲಾಗ್ತಾ ಇದೆ. ಹೀಗಾಗಿ ಜಲಾಶಯಗಳಲ್ಲಿ ಸಂಗ್ರಹವಾಗಿದ್ದ ನೀರು ಮಂಗಳವಾದದೊಳಗಾಗಿ 25.09 ಟಿಎಂಸಿಗೆ ಕುಸಿತ ಕಂಡಿದೆ. ಸುಮಾರು 8.58 ಟಿಎಂಸಿ ನೀರಷ್ಟು ತಮಿಳುನಾಡಿಗೆ ಹರಿದಿದೆ. ಸುಪ್ರೀ ಆದೇಶದ ಪಾಲನೆ ಮಾಡುತ್ತಿರುವ ರಾಜ್ಯ ಸರ್ಕಾರದ ನಡೆಯಿಂದ ಮುಂದಿನ ದೊಡ್ಡ ಪರಿಣಾಮವನ್ನು ಎದುರಿಸಲು ಸಿದ್ದವಾಗಿ ನಿಂತಿದೆ. ಈಗಾಗಲೇ ಕಾವೇರಿ ಜಲಾಶಯಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದ್ದು, ಕಾವೇರಿ ನದಿ ನೀರಿನ ನಾಲ್ಕೂ ಜಲಾಶಯಗಳ ನೀರಿನ ಮಟ್ಟ 25 ಟಿಎಂಸಿಗೆ ಬಂದು ನಿಂತಿದೆ. ಇನ್ನು ಮಂದಿನ ಹಿಂಗಾರು ಮಳೆಯು ರಾಜ್ಯಕ್ಕೆ ಕೈಕೊಟ್ಟಲ್ಲಿ ಜಲಾಶಯಗಳಲ್ಲಿನ ನೀರು ಮುಂದಿನ ಮೇ ತಿಂಗಳವರೆಗೂ ಬರೋದು ಅನುಮಾನ ಎನ್ನಲಾಗುತ್ತಿದೆ.
ಇನ್ನು ಕೋರ್ಟ್ ಆದೇಶದಂತೆ 1 ರಿಂದ 6 ರವರೆಗೆ ಪ್ರತಿ ದಿನ 6 ಸಾವಿರ ಕ್ಯೂಸೆಕ್ಸ್‍ನಂತೆ ಹಾಗೂ ಅ.7 ರಿಂದ ಪ್ರತಿ ದಿನ 2 ಸಾವಿರ ಕ್ಯೂಸೆಕ್ಸ್ ನೀರಿನಂತೆ ಒಟ್ಟು 24 ಸಾವಿರ ಕ್ಯೂಸೆಕ್ಸ್ ನೀರನ್ನು ಈ ತಿಂಗಳಲ್ಲಿ ತಮಿಳುನಾಡಿಗೆ ಹರಿಬಿಡಲಾಗಿದೆ. ರಾಜ್ಯದ ಜಲಾಯನ ಭಾಗಗಳಿಗೂ ನೀರು ಹರಿಸಲಾಗ್ತಾ ಇದ್ದು ಜಲಾಶದಗಳಿಂದ ಕನಿಷ್ಠಪಕ್ಷ 7.5 ರಿಂದ 7 ಟಿಎಂಸಿ ನೀರನ್ನು ಹರಿಬಿಡಲಾಗ್ತಾ ಈದೆ. ಕಾವೇರಿ ಕೊಳ್ಳದ ಒಳಹರಿವು ಹಾಗೂ ಹೊರ ಹರಿವಿನ ನಡುವೆ ಭಾರೀ ಅಂತರ ಏರ್ಪಟ್ಟಿದ್ದು ಕಾವೇರಿ ನದಿ ನೀರಿನ ಮಟ್ಟದಲ್ಲಿನ ಬದಲಾವಣೆಗೆ ಕಾರಣವಾಗ್ತಾ ಇದೆ ಎನ್ನುತ್ತಾರೆ ತಜ್ಞರು.

POPULAR  STORIES :

ಹುಡುಗಿಯೊಬ್ಳು ಐಫೋನ್ ತಗೊಳೋಕೆ ನಿಮ್ಮತ್ರ ದುಡ್ ಕೇಳುದ್ರೆ..?

Oxford ಇಂಗ್ಲೀಷ್ ಡಿಕ್ಷನರಿಯಲ್ಲಿ ದಕ್ಷಿಣ ಭಾರತದ ಎರಡು ಸಾಮಾನ್ಯ ಪದಗಳ ಸೇರ್ಪಡೆ..!

ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!

ಏಳು ಸಾವಿರ ವರ್ಷಗಳ ಹಿಂದಯೇ ಏಲಿಯನ್ಸ್ ವಿಮಾನ ನಿಲ್ದಾಣ ನಿರ್ಮಿಸಿಕೊಂಡಿದ್ವು : ಇರಾಕ್ ಸಚಿವ..!

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...