ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಆಯ್ಕೆಯಾಗಿದ್ದಾರೆ.
ಇಂದು ನಡೆದ ಚುನಾವಣೆಯಲ್ಲಿ ಕಂಬಾರರು ಮರಾಠಿ ಲೇಖಕ ಬಾಲಚಂದ್ರ ನೆಮಾಡೆ ಹಾಗೂ ಒರಿಯಾ ಲೇಖಕಿ ಪ್ರತಿಭಾ ರೊಯ್ ಅವರಿಗಿಂತ ಹೆಚ್ಚಿನ ಮತ ಪಡೆದು ವಿಜಯೀಯಾದರು.
ಒಟ್ಟು 89ಮತಗಳಲ್ಲಿ ಚಂದ್ರಶೇಖರ ಕಂಬಾರರು 56ಮತಗಳನ್ನು, ಪ್ರತಿಭಾ ರೊಯ್ 29ಮತಗಳನ್ನು ಹಾಗೂ ನೆಮಾಡೆ 4ಮತಗಳನ್ನು ಪಡೆದರು.