ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಚಂದ್ರಯಾನ -2 ಉಡಾವಣೆ ತಾಂತ್ರಿಕ ಕಾರಣಗಳಿಂದ 2019ಕ್ಕೆ ಮುಂದೂಡಿಕೆಯಾಗಿದೆ. ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಮತ್ತಿಮ್ಮೆ ಮುಂದೂಡಿಕೆಯಾಗಿದೆ.
ಇತ್ತ ಇಸ್ರೇಲ್ ನ ಸ್ಪೇಸ್ ಅಯಾಲ್ ಬಾಹ್ಯಾಕಾಶ ಸಂಸ್ಥೆ ಡಿಸೆಂಬರ್ ನಲ್ಲಿ ಚಂದ್ರನ ಅಂಗಳಕ್ಕೆ ನೌಕೆಯೊಂದನ್ನು ಉಡಾವಣೆ ಮಾಡಲು ಯೋಚಿಸಿದೆ.
9ರಾಕೆಟ್ ಬಳಸಿ ಉಡಾವಣೆಗೊಳ್ಳಲಿರುವ ಇಸ್ರೇಲ್ ನೌಕೆ ಚಂದ್ರನ ಅಂಗಳದ ಮೇಲೆ 2019ರ ಫೆಬ್ರವರಿ 13ರಂದು ಇಳಿಯಲಿದೆ. ಹೀಗಾಗಿ ಚಂದ್ರನ ಮೇಲೆ ರೋಬರ್ ಇಳಿಸಿದ ನಾಲ್ಕನೇ ದೇಶ ಖ್ಯಾತಿಗಳಿಸುವುದಕ್ಕೆ ಭಾರತ ಮತ್ತು ಇಸ್ರೇಲ್ ನಡುವೆ ಪೈಪೋಟಿ ಏರ್ಪಟ್ಟಿದೆ .