ಮಹಿಳೆ ಮೇಲಿನ ಅತ್ಯಾಚಾರ ತಪ್ಪಿಸಲು ಚಲಿಸುತ್ತಿದ್ದ ರೈಲಿನಿಂದ ಜಿಗಿದ ಪೊಲೀಸ್…!

Date:

ಪೊಲೀಸ್ ಪೇದೆಯೊಬ್ಬರು ತನ್ನ ಪ್ರಾಣದ ಹಂಗನ್ನು ತೊರೆದು ಚಲಿಸುತ್ತಿದ್ದ ರೈಲಿನಿಂದ ಜಿಗಿದು ಮಹಿಳೆ ಮೇಲಿನ ಅತ್ಯಾಚಾರವನ್ನು ತಡೆದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ರೈಲ್ವೆ ರಕ್ಷಣಾ ಪಡೆಯ 26ವರ್ಷದ ಶಿವಾಜಿ ಎಂಬುವವರೇ ಸಾಹಸ ಮೆರೆದು ಸಂತ್ರಸ್ತೆಯನ್ನು ರಕ್ಷಿಸಿದ ಪೊಲೀಸ್.
ಘಟನೆ ಸೋಮವಾರ ರಾತ್ರಿ ಚೆನ್ನೈನ ಪಾರ್ಕ್ ಟೌನ್ ನಿಲ್ದಾಣದಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ.
ಶಿವಾಜಿ ಹಾಗೂ ಮತ್ತೋರ್ವ ಕಾನ್ಸ್ ಸ್ಟೇಬಲ್ ಮತ್ತು ಸಬ್ ಇನ್ಸ್ ಪೆಕ್ಟರ್ ಎಸ್ ಸುಬ್ಬಯ್ಯ ಅವರ ವೆಲಚೇರಿಯಿಂದ ಚೆನ್ನೈ ಬೀಚ್ ಗೆ ಗಸ್ತು ಕರ್ತವ್ಯಕ್ಕಾಗಿ ಲೋಕಲ್ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದರು.


ಈ ವೇಳೆ ಚಿಂತಾದ್ರಿ ಪೇಟ್ ನಿಲ್ದಾಣದಿಂದ ರೈಲು ಹೊರಟಾಗ ರಾತ್ರಿ 11.45ಕ್ಕೆ ಪಕ್ಕದ ಬೋಗಿಯಿಂದ ಮಹಿಳೆಯೊಬ್ಬರು ಚೀರಾಡುವುದು ಕೇಳಿದೆ.‌ ಆ ರೈಲಿನಲ್ಲಿ ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ಒಳಗಿನಿಂದಲೇ ಹೋಗೋ ವ್ಯವಸ್ಥೆಯಿರಲಿಲ್ಲ. ಆದ್ದರಿಂದ ಶಿವಾಜಿ ಮುಂದಿನ ನಿಲ್ದಾಣ ಪಾರ್ಕ್ ಟೌನ್ ನಲ್ಲಿ ರೈಲು ನಿಧಾನವಾಗುವುದನ್ನು ಕಾಯ್ತಿದ್ದರು. ರೈಲು ನಿಧಾನವಾಗುತ್ತಿದ್ದಂತೆ. ಕೂಡಲೇ ಬೋಗಿಯಿಂದ ಪ್ಲಾಟ್ ಫಾರ್ಮ್ ಗೆ ಹಾರಿ ವೇಗವಾಗಿ ಮಹಿಳೆಯಿದ್ದ ಬೋಗಿಗೆ ಓಡಿದ್ದಾರೆ.


ಆ ಬೋಗಿಯಲ್ಲಿ ಸತ್ಯರಾಜ್ ಎಂಬಾತ 25 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಲು ಯತ್ನಿಸುತ್ತಿದ್ದನು. ಶಿವಾಜಿ ತಕ್ಷಣ ಆತನನ್ನು ತಳ್ಳಿ ಮಹಿಳೆಯನ್ನು ರಕ್ಷಿಸಿದ್ದಾರೆ. ಶಿವಾಜಿಯ ಸಾಹಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

Share post:

Subscribe

spot_imgspot_img

Popular

More like this
Related

ಬಿಜೆಪಿ ಜನರ ಮೊದಲ ಆಯ್ಕೆ, ಕಾಂಗ್ರೆಸ್ ದೇಶದ ವಿಶ್ವಾಸ ಕಳೆದುಕೊಂಡಿದೆ: ಪ್ರಧಾನಿ ಮೋದಿ ವಾಗ್ದಾಳಿ

ಬಿಜೆಪಿ ಜನರ ಮೊದಲ ಆಯ್ಕೆ, ಕಾಂಗ್ರೆಸ್ ದೇಶದ ವಿಶ್ವಾಸ ಕಳೆದುಕೊಂಡಿದೆ: ಪ್ರಧಾನಿ...

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಅಟ್ಟಹಾಸ: ಕ್ಷುಲ್ಲಕ ಕಾರಣಕ್ಕೆ ಸಹಾಯಕ ಜೈಲರ್ ಮೇಲೆ ಹಲ್ಲೆ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಅಟ್ಟಹಾಸ: ಕ್ಷುಲ್ಲಕ ಕಾರಣಕ್ಕೆ ಸಹಾಯಕ ಜೈಲರ್...

ಬಿಗ್ ಬಾಸ್ ಕನ್ನಡ ಸೀಸನ್ 12: ಗಿಲ್ಲಿ–ಅಶ್ವಿನಿ ಮಧ್ಯೆ ಟೈಟ್ ಫೈಟ್, ಫೈನಲ್ ಗೆಲುವಿಗೆ ಕುತೂಹಲ

ಬಿಗ್ ಬಾಸ್ ಕನ್ನಡ ಸೀಸನ್ 12: ಗಿಲ್ಲಿ–ಅಶ್ವಿನಿ ಮಧ್ಯೆ ಟೈಟ್ ಫೈಟ್,...

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬೀಸಾಕೋ ಅಭ್ಯಾಸವಿದ್ರೆ ಈಗ್ಲೆ ಬಿಟ್ಟುಬಿಡಿ; ಇದರಲ್ಲೂ ಅಡಗಿದೆ ನಾನಾ ಲಾಭಗಳು!

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬೀಸಾಕೋ ಅಭ್ಯಾಸವಿದ್ರೆ ಈಗ್ಲೆ ಬಿಟ್ಟುಬಿಡಿ; ಇದರಲ್ಲೂ...