ಉತ್ತಮವಾಗಿ ಪರೀಕ್ಷೆ ಬರೆದಿಲ್ಲ ಎಂದು ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ 16ನೇ ವಾರ್ಡ್ ನಲ್ಲಿ ನಡೆದಿದೆ.
ತನುಜಾ (21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಈಕೆ ಬಾಗೇಪಲ್ಲಿ ಪಟ್ಟಣದ ನ್ಯಾಷನಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ ಎಸ್ಸಿ ವ್ಯಾಸಂಗ ಮಾಡ್ತಿದ್ದರು. ಶುಕ್ರವಾರ ರಸಾಯನ ಶಾಸ್ತ್ರದ ಪರೀಕ್ಷೆ ಬರೆದು ಬಂದವರು, ಪರೀಕ್ಷೆ ಚೆನ್ನಾಗಿ ಬರೆದಿಲ್ಲ ಎಂದು ಕುಟುಂಬದವರ ಬಳಿ ಹೇಳಿಕೊಂಡಿದ್ದಳು. ಮನೆಯವರು ಏನೂ ಆಗಲ್ಲ ಎಂದು ಸಮಾಧಾನಪಡಿಸಿದರೂ ಕೋಣೆ ಸೇರಿಕೊಂಡು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಅಂತಿಮ ವರ್ಷದ ಪರೀಕ್ಷೆ ಸರಿಯಾಗಿ ಎದುರಿಸಿಲ್ಲ. ನಾನು ಅನುತ್ತೀರ್ಣಳಾಗುತ್ತೇನೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.