ಕಟ್ಟಡ ಕುಸಿತದಿಂದ ತಾನು ಸತ್ತು ತನ್ನ ಅಸುಗೂಸನ್ನು ಅಪ್ಪಿಕೊಂಡು ಅದಕ್ಕೆ ಮರು ಜೀವ ನೀಡಿದ ಘಟನೆ ಚೀನಾ ದೇಶದಲ್ಲಿ ಸಂಭವಿಸಿದೆ. ಬಹು ಮಹಡಿ ಕಟ್ಟಡ ದುರಂತದದಲ್ಲಿ 3 ವರ್ಷದ ಮಗು ಪವಾಡ ಸದೃಶವಾಗಿ ಪಾರಾಗಿದ್ದು ಸತತ 15 ಗಂಟೆಗಳ ಕಾರ್ಯಾಚರಣೆಯ ಬಳಿಕ ಆ ಮಗುವನ್ನು ಹೊರ ತಗಿಯಲಾಗಿದೆ. ರಕ್ಷಣಾ ಕಾರ್ಯಾಚರಣೆಯ ವೇಳೆ ರಕ್ಷಣಾ ಸಿಬ್ಬಂದಿಗೆ ಸಿಮೆಂಟ್ ಕಂಬದ ಅಡಿಯಲ್ಲಿ ಒಂದು ಶವ ಪತ್ತೆಯಾಗಿದ್ದು ಅದನ್ನು ತೆರವುಗೊಳಿಸಿದಾಗ ಮಗು ಜೀವಂತವಾಗಿರೋದು ಪತ್ತೆಯಾಗಿದೆ.
ಕಟ್ಟಡ ಕುಸಿದು ಬೀಳುತ್ತಿದ್ದಂತೆಯೇ ಮಗುವು ನಿಂಗ್ಸಿ ತನ್ನ ತಂದೆಯನ್ನು ಬಿಗಿಯಾಗಿ ಅಪ್ಪಿಕೊಂಡಿದೆ. ಈ ವೇಳೆ ಕಟ್ಟಡದ ಅವಶೇಷಗಳು ಮಗುವಿನ ಮೇಲೆ ಬೀಳದಂತೆ ತಡೆದಿದ್ದಾನೆ ಆದರೆ ತಂದೆ ಮಾತ್ರ ಬದುಕುಳಿಯಲಿಲ್ಲ. ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಾದೃಷ್ಟ ಅಂದ್ರೆ ಮಗುವಿನ ತಂದೆ ತಾಯಿ ಸೇರಿದಂತೆ ಇಡೀ ಕುಟುಂಬವೇ ಕಟ್ಟಡ ದುರಂತದಲ್ಲಿ ಬಲಿಯಾಗಿದ್ದು ಮಗು ಮಾತ್ರ ಬದುಕುಳಿದಿದೆ. ಖಾಸಗೀ ಷೂ ಕಂಪನಿಯೊಂದರಲ್ಲಿ ಕೆಲಸ ಮಾಡ್ತಾ ಇದ್ದ ಮಗುವಿನ ತಂದೆ ದುರಂತದಲ್ಲಿ ಮಗುವನ್ನು ಅಪ್ಪಿಕೊಂಡು ಸಾವನ್ನಪ್ಪಿರುವ ದೃಶ್ಯ ಎಂತವರ ಮನ ಕಲಕುವಂತಿತ್ತು. ಪೂರ್ವ ಚೀನಾದ ವೆಂಗ್ ಜೂ ನಲ್ಲಿ ಬಹು ಅಂತಸ್ತಿನ ಮಹಡಿ ಕುಸಿತ ಉಂಟಾಗಿದ್ದು, ದುರಂತದಲ್ಲಿ ಸುಮಾರು 22 ಮಂದಿ ಸಾವನ್ನಪ್ಪಿದ್ದಾರೆ. ಮಗು ಸೇರಿದಂತೆ 6 ಮಂದಿಯ ಜೀವವನ್ನು ರಕ್ಷಿಸಲಾಗಿದೆ.
POPULAR STORIES :
ಬಿಎಂಡಬ್ಲ್ಯೂ ವಾಪಾಸ್ ನೀಡಲು ನಿರ್ಧರಿಸಿದ ದೀಪಾ ಕರ್ಮಕರ್.
ಹುಡುಗಿಯೊಬ್ಳು ಐಫೋನ್ ತಗೊಳೋಕೆ ನಿಮ್ಮತ್ರ ದುಡ್ ಕೇಳುದ್ರೆ..?
Oxford ಇಂಗ್ಲೀಷ್ ಡಿಕ್ಷನರಿಯಲ್ಲಿ ದಕ್ಷಿಣ ಭಾರತದ ಎರಡು ಸಾಮಾನ್ಯ ಪದಗಳ ಸೇರ್ಪಡೆ..!
ಇನ್ನು ಕೆಲವೇ ದಿನಗಳಲ್ಲಿ ಶಿರಾಡಿ ಘಾಟ್ ಬಂದ್..!
ಏಳು ಸಾವಿರ ವರ್ಷಗಳ ಹಿಂದಯೇ ಏಲಿಯನ್ಸ್ ವಿಮಾನ ನಿಲ್ದಾಣ ನಿರ್ಮಿಸಿಕೊಂಡಿದ್ವು : ಇರಾಕ್ ಸಚಿವ..!