ಅದು ಚೀನಾದ ಚೆಂಗಡು ವಿಮಾನ ನಿಲ್ದಾಣ. ಉರುಮ್ಕಿ ನಗರಕ್ಕೆ ವಿಮಾನ ಹೊರಡ್ತಾ ಇತ್ತು. ಅದರಲ್ಲೊಬ್ಬ ಭೂಪ ಕಿಟಕಿ ಪಕ್ಕದಲ್ಲೇ ಕೂತಿದ್ದ. ಯಾಕೋ ತುಂಬಾ ಸೆಖೆ ಆಗ್ತಿದೆ ಅನಿಸ್ತಾ ಇತ್ತು ಪಾಪ ಅವನಿಗೆ. ಹೊರಗೆ ನೋಡ್ದ…ಆಹಾ ಹೊರಗೆ ವಾತಾವರಣ ಎಷ್ಟು ತಣ್ಣಗಿದೆ ಅನಿಸ್ತು ಅವನಿಗೆ. ಯಾಕೆ ಕಿಟಕಿ ತೆಗೀಬಾರ್ದು ಅಂದ ಪಕ್ಕದಲ್ಲಿದ್ದ ಒಂದು ಲಾಕ್ ಎಳೆದ.. ಅಷ್ಟೇ… ರಪ್ ಅಂತ ವಿಮಾನದ ಎಮರ್ಜೆನ್ಸಿ ಬಾಗಿಲು ಓಪನ್ ಆಯ್ತು. ವಿಮಾನದಲ್ಲಿ ಕಿಟಕಿ ತೆಗೆಯೋಕಾಗಲ್ಲ ಅಂತಾನೂ ಗೊತ್ತಿಲ್ಲದ ಅವನಿಗೆ ವಿಮಾನದ ಬಾಗಿಲು ರಪ್ ಅಂತ ಓಪನ್ ಆಗಿದ್ದು ನೋಡಿ ಜೀವ ಬಾಯಿಗೆ ಬಂದಿದೆ. ಅದೃಷ್ಟಕ್ಕೆ ವಿಮಾನ ಇನ್ನೂ ಟೇಕಾಫ್ ಆಗಿರಲಿಲ್ಲ. ಹಾಗಾಗಿ ಬಚಾವ್ ಆದ. ಇಲ್ಲಾ ಅಂದ್ರೆ ಆಗಸಕ್ಕೆ ವಿಮಾನ ಏರಿದ ಮೇಲೆ ಎಮರ್ಜೆನ್ಸಿ ಡೋರ್ ಓಪನ್ ಮಾಡಿರ್ತಿದ್ರು ಸಾಹೇಬ್ರು…
ಈ ತರಹದ ಎಡವಟ್ಟುಗಳು ಚೀನಾದಲ್ಲಿ ಬೇಕಾದಷ್ಟು ಆಗಿವೆಯಂತೆ. 2014ರಲ್ಲೂ ಇಂಥದ್ದೇ ಟನೆ ನಡೆದಾಗ ಪ್ರಯಾಣಿಕನಿಗೆ ಸಖತ್ ದಂಡ ಸಹ ಹಾಕಿದ್ರಂತೆ.. ಹಾಗೇ ಈ ಸಲವೂ ಆಗಿದೆ. ನಂಗೇನ್ ಗೊತ್ತು, ಕಿಟಕಿ ಓಪನ್ ಆಗುತ್ತೆ ಅನ್ಕೊಂಡೆ ಬಾಗಿಲು ಓಪನ್ ಆಯ್ತು ಅಂತ ವಾದ ಮಾಡಿದ್ನಂತೆ ಆ ಭೂಪ… ಅದಕ್ಕೆ ವಿಮಾನ ಸಂಸ್ಥೆಯವರು ‘ ನೋಡಪ್ಪಾ, ನಮ್ಗದೆಲ್ಲಾ ಗೊತ್ತಿಲ್ಲ, ನಿನ್ನಿಂದ ಉಳಿದ ಪ್ರಯಾಣಿಕರಿಗೆ ಸಮಸ್ಯೆ ಆಗಿದೆ. ವಿಮಾನವೂ ಅರ್ಧ ಗಂಟೆ ತಡವಾಗಿದೆ. ತೆಪ್ಪಗೆ ಫೈನ್ ಕಟ್ಟು ಅಂತ ದಂಡ ಕಟ್ಟಿಸ್ಕೊಂಡ್ರಂತೆ..ನೀವೂ ಅಪರೂಪಕ್ಕೆ ವಿಮಾನ ಏರಿ ಎಮರ್ಜೆನ್ಸಿ ಡೋರ್ ಬಳಿ ಕೂತ್ರೆ ಹುಷಾರು..ಕಿಟಕಿ ತೆಗೆಯೋಕೆ ಟ್ರೈ ಮಾಡ್ಬಿಟ್ಟೀರಿ…
POPULAR STORIES :
ಪ್ರತಿಯೊಬ್ಬರಿಗೂ ಈ ಅನುಭವ ಆಗಿರುತ್ತೆ..! ಆದ್ರೆ ಹೇಳ್ಕಳಕ್ಕಾಗಲ್ಲ, ಬಿಡಕ್ಕಾಗಲ್ಲ..!
ಅವತ್ತು ಗದ್ದೆ ಕೆಲಸ ಮಾಡ್ತಿದ್ದವರು…ಇವತ್ತು ಅಮೆರಿಕದಲ್ಲಿ ಕಂಪನಿ ಸಿಇಓ…!
ಗಂಡ ಸತ್ತರೂ ಅವನ ಮೇಲೆ “ವರದಕ್ಷಿಣೆ ಕಿರುಕುಳದ” ಆರೋಪ..! ಐಪಿಸಿ ಸೆಕ್ಷನ್ 498ಎ ಮಿಸ್ ಯೂಸ್ ಆಗ್ತಿದೆಯೇ..?
ಆ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 20 ವರ್ಷ..! ಇಪ್ಪತ್ತು ವರ್ಷದ ನಂತರ ಶಾರುಖ್-ಕಾಜೋಲ್ ಮಾತುಕತೆ..
ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!
ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..
ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!