ಕೊಲೆ ಪ್ರಕರಣವೊಂದನ್ನು ಕೇವಲ 36ಗಂಟೆಯಲ್ಲಿ ಬೇಧಿಸಿ , ಹಂತಕನನ್ನು ಅರೆಸ್ಟ್ ಮಾಡಿದ್ದಾರೆ ಚಿತ್ರದುರ್ಗದ ಹೊಳಲ್ಕೆರೆ ಪೊಲೀಸರು.
ಚಿತ್ರದುರ್ಗದ ಶೂರ ವಾರಪತ್ರಿಕೆ ಸಂಪಾದಕ ಮಂಜುನಾಥ್ ಹತ್ಯೆಯಾದ ದುರ್ದೈವಿ. ವಿಜಯಕುಮಾರ್ ಆರೋಪಿ. ಆಗಸ್ಟ್ 25ರಂದು ಈತನ ಮದ್ವೆ ನಿಶ್ಚಯವಾಗಿತ್ತು. ಈಗ ಕೊಲೆ ಮಾಡಿ ಜೈಲು ಸೇರಿದ್ದಾನೆ.
ಕೊಲೆಯಾದ ಮಂಜುನಾಥ್ ತನ್ನ ಪತ್ರಿಕೆ ಹೆಸರು ಹೇಳಿಕೊಂಡು ಬೇರೆ ಬೇರೆ ವ್ಯವಹಾರಗಳನ್ನು ಮಾಡುತ್ತಿದ್ದನು. ಆಗಸ್ಟ್ 6ರ ಸಂಜೆ ಮನೆಯಿಂದ ಹೋದ ಮಂಜುನಾಥ್ ವಾಪಸ್ಸು ಬಂದಿರಲಿಲ್ಲ. ಹೊಳಲ್ಕೆರೆ ಪಟ್ಟಣ ಬಳಿಯ ಅರಳಿಹಳ್ಳಿ ಬಳಿ ತನ್ನ ಸ್ಕಾರ್ಪಿಯೋ ವಾಹನದಲ್ಲಿ ಇವರ ಮೃತದೇಹ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಅರೆಬೆಂದ ಸ್ಥಿತಿಯಲ್ಲಿದ್ದರಿಂದ ಗುರುತು ಪತ್ತೆಯಾಗಿಲ್ಲ. ಉಂಗುರದಿಂದ ಮಂಜುನಾಥ್ ಎಂಬುದು ತಿಳಿದುಬಂದಿತ್ತು.
ಮಂಜುನಾಥ್ ಮತ್ತು ವಿಜಯ್ ಕುಮಾರ್ ನಡುವೆ ದೊಡ್ಡಮಟ್ಟಿನಲ್ಲಿ ದುಡ್ಡಿನ ವ್ಯವಹಾರ ನಡೆಯುತ್ತಿತ್ತು.
ಮೃತ ಮಂಜುನಾಥ್
ಆದರೆ ಆಗಸ್ಟ್ 5 ರ ರಾತ್ರಿ ದೊಡ್ಡಘಟ್ಟ ಬಳಿ ಇಬ್ಬರು ತಲ್ಲಾಡಿ ಜಗಳ ಮಾಡಿಕೊಂಡಿದ್ದಾರೆ. ಈ ತಲ್ಲಾಟದಲ್ಲಿ ವಿಜಯ್ ಕುಮಾರ್ ಮಂಜುನಾಥನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ನಂತರ ಕೊಲೆ ಮಾಡಿದ ದೇಹವನ್ನ ಅರೇಹಳ್ಳಿ ಬಳಿ ಕಾರು ಸಮೇತ ತಂದು ಸುಟ್ಟು ಹಾಕಿದ್ದಾನೆ.
ಆರೋಪಿ ವಿಜಯ ಕುಮಾರ್