ಪೋಷಕರಿಂದ ತಮ್ಮ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಗಲಿಲ್ಲ ಅಂತ ಪ್ರೇಮಿಗಳು ಕಾಡಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಮಾನಸ (18) ಮತ್ತು ರಂಗಸ್ವಾಮಿ (19) ಆತ್ಮಹತ್ಯೆ ಮಾಡ್ಕೊಂಡ ಪ್ರೇಮಿಗಳು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಿ.ವಿ ಪುರ ಅರಣ್ಯ ಪ್ರದೇಶದಲ್ಲಿ ಈ ಯುವ ಪ್ರೇಮಿಗಳು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ. ಮೃತೆ ಮಾನಸ ಮಾಯಸಂದ್ರ ಗ್ರಾಮದ ನಿಜಲಿಂಗಪ್ಪ ಅವರ ಮಗಳು, ರಂಗಸ್ವಾಮಿ ಭರಮಗಿರಿಯ ಕರಿಯಪ್ಪ ಅವರ ಎಂದು ತಿಳಿದುಬಂದಿದೆ.
ಮಾನಸ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ರಂಗಸ್ವಾಮಿ ದ್ವಿತಿಯ ಪಿಯುಸಿ ವ್ಯಾಸಗಂಗ ಮಾಡುತ್ತಿದ್ದ.
ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.
ಇಬ್ಬರ ವಯಸ್ಸು ಚಿಕ್ಕದು ಹಾಗೂ ಅಂತರ್ಜಾತಿ ಎಂಬ ಕಾರಣಕ್ಕೆ ಇಬ್ಬರ ಪೋಷಕರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇದರಿಂದ ನೊಂದ ಮಾನಸ ಮತ್ತು ರಂಗಸ್ವಾಮಿ ವಿ.ವಿ ಪುರ ಅರಣ್ಯ ಪ್ರದೇಶಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.