ಚಿತ್ರದುರ್ಗದ ಶಾಲೆಯೊಂದರಲ್ಲಿ ಒಬ್ಬಳು ವಿದ್ಯಾರ್ಥಿನಿಗೆ ಇಬ್ಬರು ಶಿಕ್ಷಕರು ಇದ್ದಾರೆ. ಖಾಸಗಿ ಶಾಲೆಗಳ ಕಡೆಗಿನ ಒಲವು ಈ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ.
ಚಳ್ಳಕೆರೆ ತಾಲೂಕಿನ ರಾಂಜೆಹಟ್ಟಿ ಗ್ರಾಮದಲ್ಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಸ್ಥಿತಿ ಇದು.
ಇಲ್ಲಿ ಇರುವುದು ಒಬ್ಬಳೇ ವಿದ್ಯಾರ್ಥಿನಿ. ಇಬ್ಬರು ಶಿಕ್ಷಕರಿದ್ದಾರೆ. ಕೆಲವು ದಿನ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಶಾಲೆ ತೆರೆದು 2 ಗಂಟೆಗೆ ಬೀಗ ಜಡಿಯಲಾಗುತ್ತದೆ. ಕಳೆದ ನಾಲ್ಕು ವರ್ಷದ ಹಿಂದೆ 80 ವಿದ್ಯಾರ್ಥಿಗಳಿದ್ದರು. ಪಾಠ ಸರಿಯಾಗಿ ನಡೆದಿಲ್ಲ ಎಂಬ ಕಾರಣಕ್ಕೆ ಬೇರೆ ಪೋಷಕರು ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಿದ್ದಾರೆ.
ಸರ್ಕಾರ ಸರ್ಕಾರಿ ಶಾಲೆಗಳನ್ನು ಉಳಿಸಲು, ಮಕ್ಕಳನ್ನು ಸೆಳೆಯಲು ನಾನಾ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ ಸರಿಯಾದ ಅನಿಷ್ಠಾನದ ಕೊರತೆಯಿಂದ ಇಂಥಾ ಗತಿ ಬಂದಿದೆ.