ಅಮ್ಮನಿಗೆ ಸೇಟು ದುಡ್ಡು ಕೊಟ್ಟಿದ್ದು ಯಾಕೆ..? ಫ್ರಾಕ್ ಹುಡ್ಗೀಯ ಚಾಕೊಲೇಟ್ ಸ್ಟೋರಿ..!

Date:

“ನಿಮ್ಮಲ್ಲಿ ಯಾರು ಚೆನ್ನಾಗಿ ಪದ್ಯ ಓದ್ತೀರೋ ಅವರಿಗೆ ಈ ಡೈರಿ ಮಿಲ್ಕ್ ಚಾಕೊಲೇಟ್” ಅಂತ ಆ ಮುಖ್ಯ ಅತಿಥಿ ಭಾಷಣದ ಮಧ್ಯೆ ಘೋಷಿಸಿದರು. ಆ ಮಕ್ಕಳು ಚಾಕೊಲೆಟ್ಗಾಗಿ ಆಸೆಯಿಂದ ಪದ್ಯಗಳನ್ನು ನಾನು ನಾನು ಅಂತ ಮುಗಿಬಿದ್ದು ಹೇಳುತ್ತಿದ್ದ ಅವರೆಲ್ಲರೂ ಅನಕ್ಷರಸ್ಥ ವೇಶ್ಯೆಯರ ಮನೆಗಳಿಂದ ರಕ್ಷಿಸಲ್ಪಟ್ಟ ಮಕ್ಕಳು. ಅವರಲ್ಲಿ ಕೆಲವರು ಬಾಲ್ಯದಲ್ಲಿ ಹೆಚ್ಐವಿಯನ್ನು ತಂದುಕೊಂಡ ಹತಭಾಗ್ಯರು. ಚೆನ್ನಾಗಿ ಪದ್ಯ ಓದಿದ ಮೂವರು ಮಕ್ಕಳಿಗೆ ಅತಿಥಿ ಚಾಕೊಲೆಟ್ ಕೊಟ್ಟರು. ಸಮಾರಂಭ ಮುಗಿದ ಮೇಲೆ ನಾಲ್ಕನೆಯ ಹುಡುಗಿ ಅವರ ಬಳಿಗೆ ಹೋಗಿ ಕೇಳಿದಳು. “ಅಂಕಲ್, ನಾನು ಫ್ರಾಕ್ `………..’, ನಂಗೂ ಚಾಕೊಲೇಟ್ ಕೊಡ್ತೀರಾ? ??”

ಅತಿಥಿ ನಿಬ್ಬೆರಗಾಗಿ ಆ ಬಾಲಕಿಯನ್ನು ಹತ್ತಿರ ಕರೆದು “ಯಾರ್ ಹೇಳ್ಕೊಟ್ಟಿತ್ತು ಇದ್ನಾ ನಿಂಗೆ”? ಎಂದು ಕ್ಷೀಣ ದನಿಯಲ್ಲಿ ಕೇಳಿದರು. “ಯಾರೂ ಇಲ್ಲ ಅಂಕಲ್, ನಾನೇ ನೋಡಿದ್ದು. ನಮ್ಮಮ್ಮಂಗೆ ಅವತ್ತು ದುಡ್ಡು ಬೇಕಿತ್ತಂತೆ. ಅದಕ್ಕೆ ಆ ಮಾರ್ವಾಡಿ ಅಂಗಡಿ ಓನರ್ ರವೀಂದ್ರ ಸೇಟ್ ಹತ್ತಿರ ಹೋಗಿ `ಸಾವಿರ ರೂಪಾಯಿ ಬೇಕು’ ಎಂದಾಗ ಆ ಸೇಟು ಅವಳನ್ನು ತನ್ನ ಕೋಣೆಗೆ ಕರೆದೊಯ್ದಾಗ ಅಮ್ಮ ಈ ರೀತಿ ಮಾಡಿದಳು, ಆ ಸೇಟು ದುಡ್ಡು ಕೊಟ್ಟ’ ಅಂತ ಅಂಭೋದ ಕಂಗಳ ಹುಡುಗಿ ಹೇಳಬೇಕಾದರೆ ಅತಿಥಿ ಕಂಗಳಲ್ಲಿ ಕಣ್ಣೀರಿನ ಮೋಡಗಳು ಸರಿದಾಡಿದವು.

ಆ ಘಟನೆಯನ್ನು ನೆನ್ನೆ ಮಧ್ಯಾಹ್ನ ಮನೆಯಲ್ಲಿ ಒಬ್ಬನೇ ಇದ್ದಾಗ ಓದಿದೆ. ತಡೆಯಲಾಗಲಿಲ್ಲ. ಪುಸ್ತಕ ಮುಚ್ಚಿಟ್ಟೆ. ಕಳೆದ ನವೆಂಬರ್ 14, ಮಕ್ಕಳ ದಿನಾಚರಣೆ. ಮಕ್ಕಳಿಗೊಸ್ಕರ ಏನಾದರೂ ಮಾಡಬೇಕೆನ್ನಿಸಿತ್ತು; ಆಗಲಿಲ್ಲ. ಮಾರ್ಚ್ ಎಂಟರಂದು ಮಹಿಳೆಯರ ದಿನಾಚರಣೆಯ ಅಂಗವಾಗಿ ಕೂಡ ಏನ್ನನಾದರೂ ಮಾಡಲೇಬೇಕು ಅನ್ನಿಸಿತು. ಕೆಲವರ ಬಳಿ ಸಲಹೆ ಕೇಳಿದೆ. ಒಬ್ಬೊಬ್ಬರು ಒಂದೊಂದು ಥರ ಹೇಳುತ್ತಿದ್ದರು. ಮೊದಲೇ ನನ್ನ ತಲೆ ಸರಿಯಿಲ್ಲವೆಂದು ವೈದ್ಯರು ಕರಾರುವಾಕ್ಕಾಗಿ ಹೇಳಿಬಿಟ್ಟಿದ್ದಾರೆ. ಅಂತಹುದರಲ್ಲಿ ಈ ಗೊಂದಲುಗಳು ಬೇರೆ..? ಮನಸ್ಸು ಕಲ್ಲಾಗಿ ಪರಿವರ್ತನೆಗೊಂಡ ಕಾಲ ಅದು. ಕಲ್ಲಾಗಿದ್ದರೂ ನೀರಲ್ಲಿ ತೇಲುವಷ್ಟು ಹುಚ್ಚುದೈರ್ಯವಿತ್ತು. ಅದಕ್ಕೆ ಇನ್ನೂ ತೇಲುತ್ತಿದ್ದೆ. ಬೆಂದು ನರಳುತ್ತಿದೆ. ಬೇರೆ ಏನನ್ನೂ ಓದಲಾಗಲಿಲ್ಲ. ನಿನ್ನೆ ಸುಮ್ಮನೆ ಒಂದು ಪುಸ್ತಕದ ಮೇಲೆ ಕಣ್ಣಾಡಿಸಿದೆ. ಅದರಲ್ಲಿ ಹೈದರಾಬಾದ್ನ ‘ಪ್ರಜ್ವಲ’ ಎಂಬ ಹೆಚ್ಐವಿ ಪೀಡಿತ ಮಕ್ಕಳನ್ನು ಸಾಕುವ ಸಂಸ್ಥೆಯ ಬಗ್ಗೆ ಬರೆಯಲಾಗಿತ್ತು. ಅದರಲ್ಲಿತ್ತು ಈ ಚಾಕೊಲೇಟ್ ಮತ್ತು ಫ್ರಾಕ್ ಪ್ರಸಂಗ.

ಈ ದುರಂತಕ್ಕೆ ಏನು ಹೇಳುವುದು? ಹೆಣ್ಣಿಗೆ ಪ್ರತ್ಯೇಕ ಸ್ಥಾನವಿದ್ದರೂ ಅದನ್ನು ಅವಳು ಪಾಲಿಸುತ್ತಿಲ್ಲ. ಅವರು ಮಕ್ಕಳಿಗಾಗಿ ಇಂತಹ ಅಭಾಸಗಳಿಂದ ಹೊರಬರಬಹುದಿತ್ತು. ನಮಗೆ ಮಕ್ಕಳು ಅಂದ ಕೂಡಲೆ ನೆನಪಾಗುವುದು ಚಾಕೊಲೇಟ್. ಆದರೆ ಜಗತ್ತಿನಲ್ಲಿ ಸಾವಿರಾರು ಮಕ್ಕಳು ರೇಪ್ ಆಗುವುದು ಚಾಕೊಲೇಟ್ ಕೊಡಿಸುತ್ತೇನೆಂದು ಹೇಳಿ ಕರೆದೊಯ್ಯುವ ಕ್ರೂರಿಗಳಿಂದ. ಅವರು ಅಪರಿಚಿತರೇ ಆಗಿರಬೇಕೆಂದಿಲ್ಲ. ಪಕ್ಕದ ಮನೆಯ ಅಂಕಲ್, ಸೋದರ ಮಾವಂದಿರು, ಮೇಷ್ಟ್ರುಗಳು, ಉಸ್ತಾದ್ಗಳು, ಚಿಕ್ಕಪ್ಪಂದಿರು, ಅಜ್ಜಂದಿರು, ಅಣ್ಣಂದಿರು ಯಾರು ಬೇಕಾದರೂ ಆಗಬಹುದು. ಕಾಮತೃಷ್ಣೆಯ ಜಗತ್ತು ಎಷ್ಟು ಮಧುರವೋ ಅಷ್ಟೇ ಕ್ರೂರ ಮತ್ತು ಭೀಭತ್ಸ. ಮಕ್ಕಳ ರೇಪಿನ ಬಗ್ಗೆ ಪಿಂಕಿ ವಿರಾನಿ ಎಂಬ ಪತ್ರಕರ್ತೆ ಬಿಟರ್ ಚಾಕೊಲೇಟ್ ಎಂಬ ಪುಸ್ತಕ ಬರೆದಿದ್ದಾಳೆ. ಅದನ್ನು ಓದಿದರೇ ವೇಶ್ಯಾಜಗತ್ತಿನ ವಾಸ್ತವಗಳು ಅರ್ಥವಾಗುತ್ತವೆ.

ಮಕ್ಕಳು ಪದೇಪದೇ ರೇಪ್ ಗೆ, ದುರ್ಬಳಕೆಗೆ ಒಳಗಾದಾಗ ಅವುಗಳ ಮನಸು ಹೇಗೆ ಮೌಲ್ಡ್ ಆಗಿ ಬಿಡುತ್ತದೆ ಅಂದರೆ ಅದಕ್ಕೆ ಚಾಕೊಲೇಟ್ ಅಂದ ಕೂಡಲೆ ಫ್ರಾಕ್ನ ನೆನಪಾಗಿ ಬಿಡುತ್ತದೆ. ಇಂಥ ದುರಂತಕ್ಕೆ ಏನನ್ನಬೇಕು? ನವೆಂಬರ್ ತಿಂಗಳು ಬಂತೆಂದರೆ ನಮ್ಮ ಸರ್ಕಾರ ಪತ್ರಿಕೆಗಳಿಗೆ ಜಾಹೀರಾತು ಸುರಿಯುತ್ತದೆ. ರೇಡಿಯೋಗಳಲ್ಲಿ ಟೀವಿಗಳಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಮಾತು ಓತಪ್ರೋತ. ಕೆಲವು ಜಾಹೀರಾತುಗಳಲ್ಲಿ ಮಕ್ಕಳ ಕೊಳಕು ಧಿರಿಸು, ಚಿಂಪರುಗೂದಲು, ಕಾರ್ಮಿಕರಾಗಿ ದುಡಿಯುವ ವಿಡಿಯೋಗಳನ್ನು ತೋರಿಸಿ ಕೋಟಿಗಟ್ಟಲೆ ಹಣ ಮಾಡಿಬಿಡುತ್ತವೆ. ಆದರೆ ಒಂದು ಮಗುವಿನ ಮನಸ್ಸನ್ನು ಚಾಕೊಲೇಟ್ ಮತ್ತು ಫ್ರಾಕಿನಿಂದ ಬೇರ್ಪಡಿಸುವುದು ಹೇಗೆ? ಯಾರಾದರೂ ಯೋಚಿಸಿದ್ದಾರಾ..!?

  •  ವಿವೇಕ್, ಮಂಡ್ಯ

POPULAR  STORIES :

ಪತ್ರಿಕೋದ್ಯಮದ ಭೀಷ್ಮ..! ಬರವಣಿಗೆ ನಿಲ್ಲಿಸುತ್ತಾರಾ ರವಿ ಬೆಳಗೆರೆ..?

ಶಿವಣ್ಣನ ಜೊತೆಗೆ ಬಿಬಿಸಿ ರೇಡಿಯೋ ನಡೆಸಿದ ಸಂದರ್ಶನ ಇಲ್ಲಿದೆ.. ಕೇಳಿ..!

ಇಲ್ಲಿ ಮುಚ್ಚಿಕೊಂಡರು.. ಅಲ್ಲಿ ಬಿಚ್ಚಿಕೊಂಡರು..!! ಏನಿದೆಲ್ಲಾ ದೀಪಿಕಾ..?

ಭಾರತದಲ್ಲಿದ್ದಾರೆ ಮೂವತ್ತು ಲಕ್ಷಕ್ಕಿಂತ ಹೆಚ್ಚು ವೇಶ್ಯೆಯರು..!? ಮೈ ಮಾರಾಟ ದಂಧೆ ಲೀಗಲೈಜ್ ಆಗುತ್ತಾ..?

ಹೆಂಗಿದ್ದ ಹೆಂಗಾದ ಗೊತ್ತಾ ಅಂಬಾನಿ ಪುತ್ರ..! ಐಪಿಎಲ್ ವೇಳೆ ಅಚ್ಚರಿಗೊಳ್ಳಲು ಸಿದ್ಧರಾಗಿ..!

ದ್ವಾರಕೆಯ ದೋಸೆ ಮತ್ತವಳ ನೆನಪು..!

ಪಾಕಿಸ್ತಾನಕ್ಕಾಗಿ ಖಂಡೀಲ್ ಬಲೋಚ್ ಬೆತ್ತಳಾಗುತ್ತಾಳಂತೆ..!? #Video

`ಆ್ಯಮ್ ಸಾರೀ ಗೇಲ್’ ಅಂದ ಬಿಗ್ಬಿ ಅಮಿತಾಬ್..!? ಅಮಿತಾಬ್ ಮಾಡಿದ ತಪ್ಪೇನು..?

ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?

ಪ್ರೀತಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..! ಪ್ರೀತಿ `ಬೆಂಕಿ’ ಹುಷಾರು..!?

Share post:

Subscribe

spot_imgspot_img

Popular

More like this
Related

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿ

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿನವದೆಹಲಿ: ಡಿಸೆಂಬರ್...

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು 2024ರ ಜನವರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್...

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಕರ್ನಾಟಕದಲ್ಲಿ...

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ!

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ! ಮಂಡ್ಯ: ಮಾಂತ್ರಿಕ ಶಕ್ತಿಯುಳ್ಳ...