ರಾಜಕೀಯ ದ್ವೇಷಕ್ಕೆ ಕಾಂಗ್ರೆಸ್ ಕಚೇರಿಯಲ್ಲಿನ ವಸ್ತುಗಳು ನಾಶವಾಗಿವೆ. ವಾಹನಗಳು ಜಖಂಗೊಂಡಿವೆ.
ತಡರಾತ್ರಿ ಐದಾರು ಬೈಕ್ ಗಳಲ್ಲಿ ಆಗಮಿಸಿದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
ಬೆಂಗಳೂರಿನ ಚೋಳರಪಾಳ್ಯದ 2ನೇ ಕ್ರಾಸ್ ನಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಈ ಘಟನೆ ನಡೆದಿರೋದು.
ಚೋಳರಪಾಳ್ಯದ 2ನೇ ಕ್ರಾಸ್‍ನಲ್ಲಿರುವ ಕಾಂಗ್ರೆಸ್ ಕಚೇರಿಗೆ ನುಗ್ಗಿರುವ ದುಷ್ಕರ್ಮಿಗಳು ಹಲವು ವಸ್ತುಗಳನ್ನು ನಾಶಪಡಿಸಿದ್ದು ನಂತರ ಚೋಳರಪಾಳ್ಯದ ಗಲ್ಲಿಗಳಲ್ಲಿ ನಿಲ್ಲಿಸಿದ್ದ 25ಕ್ಕೂ ಹೆಚ್ಚು ವಾಹನಗಳನ್ನು ಜಖಂಗೊಳಿಸಿದ್ದಾರೆ. ಇನ್ನು ಚುನಾವಣಾ ಸಂದರ್ಭದಲ್ಲಿ 2 ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿತ್ತು. ಇದೇ ಇಂದಿನ ಘಟನೆಗೆ ಕಾರಣ ಎನ್ನಲಾಗಿದ್ದು, ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.