ಸಿಲಿಕಾನ್ ಸಿಟಿ ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಚರ್ಚ್ ಸ್ಟ್ರೀಟ್ ರಸ್ತೆ ನಾಳೆ(ಫೆ.10) ಯಿಂದ ಸಂಪೂರ್ಣ ಬಂದ್ ಆಗಲಿದೆ. ಈ ಮಾರ್ಗದಲ್ಲಿ ಅತೀ ಹೆಚ್ಚು ವಾಹನ ದಟ್ಟಣೆಯಿಂದಾಗಿ ರಸ್ತೆಗಳು ಹದೆಗೆಟ್ಟಿದ್ದು ತಾತ್ಕಾಲಿಕ ಡಾಂಬರೀಕರಣ ಮಾಡಿದ್ರೂ ಕೂಡ ಈಗ ಅದು ಕಿತ್ತು ಹೋಗಿದೆ. ಹೀಗಾಗಿ ಈ ಮಾರ್ಗದ ವಾಹನ ಸವಾರರಿಗೆ ಪ್ರತಿನಿತ್ಯ ತೊಂದರೆಯುಂಟಾಗಿದ್ದು ನಾಳೆಯಿಂದ ಈ ಮಾರ್ಗಕ್ಕೆ ಹೊಸ ರಸ್ತೆ ನಿರ್ಮಾಣಕ್ಕೆ ಬಿಬಿಎಂಪಿ ಅನುಮತಿ ನೀಡಿರುವುದರಿಂದ ಚರ್ಚ್ ಸ್ಟ್ರೀಟ್ ಬಂದ್ ಆಗಲಿದೆ. ಎಂ.ಜಿ ರೋಡ್ ಬ್ರಿಗೇಡ್ ರೋಡ್‍ಗಳಲ್ಲಿ ವಾಹನ ಸಂಚಾರ ಹೆಚ್ಚಿರುವ ಕಾರಣ ಹೆಚ್ಚಾಗಿ ಈ ಮಾರ್ಗವಾಗಿಯೂ ಪ್ರಯಾಣ ಬೆಳೆಸುತ್ತಾರೆ ವಾಹನ ಸವಾರರು. ಆದರೆ ಅಲ್ಲಿನ ರಸ್ತೆ ಈಗ ಸಂಪೂರ್ಣ ಹಾಳಾಗಿರುವ ಕಾರಣ ಚರ್ಚ್ ಸ್ಟ್ರೀಟ್ ರಸ್ತೆಗೆ ಪರ್ಯಾಯ ಮಾರ್ಗ ಕಲ್ಪಿಸಿ ರಸ್ತೆ ಕಾಮಗಾರಿ ನಡೆಸಬೇಕೆಂದು ಬಿಬಿಎಂಪಿ ಅಧಿಕಾರಿಗಳು ಸಂಚಾರ ವಿಭಾಗದ ಡಿಸಿಪಿ ಅಭಿಷೇಕ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಶಾಹಿದ್‍ರನ್ನು ಕೊಲ್ಲಲು ಬಯಸಿದ್ರು ಸಾನಿಯಾ ಯಾಕೆ ಗೊತ್ತಾ..?
ಪ್ರಥಮ್- ರಿಷಿಕಾ ಲಾಂಗ್ ಡ್ರೈವ್ ವೇಳೆ ಸ್ಮಾಲ್ ಆಕ್ಸಿಡೆಂಟ್..! ಮುಂದೇನಾಯ್ತು..?
ಆಡಿದ್ದು 72 ಬಾಲ್ ಗಳಿಸಿದ್ದು 300 ರನ್..! ಲಾರಿ ಚಾಲಕನ ಮಗನ ಬ್ಯಾಟಿಂಗ್ ಕಮಾಲ್..
ಈ ನಟನ ಪ್ರತಿ ತಿಂಗಳ ಖರ್ಚು 13.5 ಕೋಟಿ ಅಂತೆ
ನನ್ನನ್ನು ಸಿಎಂ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ್ರು: ಪನ್ನೀರ್ ಸೆಲ್ವಂನ ಹೊಸ ಬಾಂಬ್..!