ಬೆಂಗಳೂರು ಅಭಿವೃದ್ಧಿಯಲ್ಲಿ ಕೆಂಪೇಗೌಡರ ಪಾತ್ರ ಮಹತ್ವದ್ದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕೆಂಪೇಗೌಡರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ನಡೆಯಬೇಕು. ಸೂಕ್ತವಾದದ್ದು ಅತ್ಯಂತ ಎತ್ತರದಲ್ಲಿ ಪ್ರತಿಮೆ ನಿರ್ಮಾಣ ಮಾಡಬೇಕು ಅಂತಾ ನಮ್ಮ ಯಡಿಯೂರಪ್ಪನವರು ಅಡಿಗಲ್ಲು ಹಾಕಿದ್ರು. ಇವತ್ತು ಅದು ಎದ್ದು ನಿಂತಿದ್ದು, ಅದಕ್ಕೆ ಥೀಮ್ ಪಾರ್ಕ್ಗೆ ಭೂಮಿ ಪೂಜೆ ಮಾಡಿದ್ದೇವೆ.
ನಾಡಿನದ್ಯಾಂತ ಮಣ್ಣನ್ನ ತರಲು ಇವತ್ತು ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು. ಬೆಂಗಳೂರು ಸುತ್ತಲೂ ನಾಲ್ಕು ಸೆಟ್ ಲೈಟ್ ನಗರಗಳನ್ನ ನಿರ್ಮಾಣ ಮಾಡೋಣ. ದೇವನಹಳ್ಳಿಯಲ್ಲೂ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡಿ ಟೌನ್ ಶಿಪ್ ಮಾಡುತ್ತೇವೆ. ಇದರ ಎರಡನೇ ಟೈಮ್ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬರ್ತಿದ್ದಾರೆ.
ಲಕ್ಷಾಂತರ ಮಂದಿ ಸೇರಿ ಉದ್ಘಾಟನೆ ಮಾಡೋಣ. ಅಶ್ವಥ್ ನಾರಯಣ್ ತುಂಬಾ ಮುತವರ್ಜಿಯಿಂದ ಬಹಳ ತ್ವರಿತವಾಗಿ ಮಾಡುತ್ತಿದ್ದಾರೆ. ಕೆಂಪೇಗೌಡ ಅಂದರೇ ಯುನಿಟಿ ಅವರಡಿಯಲ್ಲಿ ನಾವೆಲ್ಲರು ಮಾಡೋಣ. ಪ್ರಗತಿಯ ಪ್ರತಿಮೆ ಅಂತಾ ಹೆಸರಿಟ್ಟು ಉದ್ಘಾಟನೆ ಮಾಡೋಣ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.