ಭಾರತೀಯ ವಿಜ್ಞಾನಿಗಳು ಜಿರಳೆಯ ಕರುಳಿನಲ್ಲಿ ಉತ್ಪಾದನೆಯಾಗುವ ಒಂದು ಸಂಯುಕ್ತ ಪದಾರ್ಥವನ್ನು ಕಂಡುಹಿಡಿದಿದ್ದಾರೆ.ಇದು ಹಸುವಿನ ಹಾಲಿಗಿಂತಲೂ ತುಂಬಾ ನ್ಯೂಟ್ರಿಶಿಯಸ್ ಆಗಿದ್ದು .ಪ್ರಪಂಚದಲ್ಲಿ ಭವಿಷ್ಯದಲ್ಲಿ ಏರುತ್ತಿರೋ ಜನಸಂಖ್ಯೆಯನ್ನು ಕಾಪಾಡುವಲ್ಲಿ ಉತ್ತಮ ಪಾತ್ರವಹಿಸುವುದು ಎಂದು ಹೇಳಲಾಗುತ್ತಿದೆ.
ಈ ಸಂಶೋಧನೆಯನ್ನು ಇಂಟರ್ನ್ಯಾಷನಲ್ ಯೂನಿಯನ್ ಆಫ್ ಕ್ರಿಸ್ಟಾಲ್ಲೋಗ್ರಾಫಿ(IUCRJ)ಯ ದಾಖಲೆಗಳಲ್ಲಿ ನಮೂದಿಸಲಾಗಿದೆ.ಜಿರಳೆಗಳು ಸಾಮಾನ್ಯವಾಗಿ ಹಾಲನ್ನು ಉತ್ಪಾದಿಸುವುದಿಲ್ಲವಾದರೂ ಕೆಲವೊಂದು ಡಿಪ್ಲೋಪ್ಟೇರಾ ವಿಧದ ಜಿರಳೆಗಳು ತನ್ನ ಯುವಾವಸ್ಥೆಯನ್ನು ಉಳಿಸುವುದಕ್ಕೋಸ್ಕರ,ಜನ್ಮ ತಾಳುವ ಮರಿಗಳಿಗಾಗಿ ಹಾಲನ್ನು ಉತ್ಪಾದಿಸುತ್ತದೆ ಅದೇ ಹಾಲಿನಲ್ಲಿ ವಿಶೇಷ ಪ್ರಮಾಣದ ಪ್ರೊಟೀನ್ ಗಳಿದ್ದು,ಈ ಪ್ರೊಟೀನ್ ಕ್ರಿಸ್ಟಲ್ ಗಳು ಸಾಮಾನ್ಯವಾದ ಹಸುವಿನ ಹಾಲಿಗೆ ಹೋಲಿಸಿದಲ್ಲಿ ಅದಕ್ಕಿಂತಲೂ ಮೂರು ಪಟ್ಟು ಅಧಿಕ ಶಕ್ತಿ ಉಳ್ಳದ್ದಾಗಿದೆ ಎಂದು ಸಾಬೀತಾಗಿದೆ.
ಸೈನ್ಸ್ ಅಲರ್ಟ್ ನೀಡಿದ ಮಾಹಿತಿಯಂತೆ ಜಿರಳೆಯಿಂದ ಹಾಲನ್ನು ಪಡೆಯುವುದು ತುಂಬಾ ಪ್ರಯಾಸದ ವಿಷಯವಾದ ಕಾರಣ,ಇನ್ಸ್ ಟಿಟ್ಯೂಟ್ ಆಫ್ ಸ್ಟೆಮ್ ಸೆಲ್ ಬಯಾಲಜಿ ಹಾಗೂ ರೀಜನರೇಟಿವ್ ಮೆಡಿಸಿನ್ ಇನ್ ಇಂಡಿಯಾ ದ ನೇತೃತ್ವದಲ್ಲಿ ಇಂಟರ್ ನ್ಯಾಷನಲ್ ಸೈಂಟಿಸ್ಟ್ ಗಳ ತಂಡವು ಪ್ರಯೋಗಾಲಯದಲ್ಲಿ ಈ ಪ್ರೋಟಿನ್ ಕ್ರಿಸ್ಟಲ್ ಗಳನ್ನು ಉತ್ಪಾದಿಸುವ ವಿಶೇಷ ಜೀನ್ ಗಳ ಮರುರೂಪಾಂತರದ ಬಗ್ಗೆ ಸಂಶೋಧನೆಯನ್ನು ನಡೆಸುತ್ತಿದೆ ಎಂದು ತಿಳಿಸಿದೆ
ರಿಸರ್ಚರ್ ಸಂಚಾರಿ ಬ್ಯಾನರ್ಜಿಯವರ ಹೇಳಿಕೆಯಂತೆ,”ಆ ಕ್ರಿಸ್ಟಲ್ ಗಳು ಒಂದು ಪರಿಪೂರ್ಣ ಆಹಾರ-ಅದರಲ್ಲಿ ಪ್ರೊಟೀನ್ಸ್,ಕೊಬ್ಬು ಹಾಗೂ ಸಕ್ಕರೆಯ ಅಂಶಗಳಿದ್ದು,ಅವಶ್ಯವಿರೋ ಎಲ್ಲಾ ಅಮೀನೋ ಆಸಿಡ್ ನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
- ಸ್ವರ್ಣಲತ ಭಟ್
POPULAR STORIES :
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!
ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!
ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!
6 ಸಾವಿರ ಕೋಟಿಯ ಒಡೆಯನ ಮಗ ಕೆಲಸ ಮಾಡುತ್ತಿರುವುದು ಬೇಕರಿಯಲ್ಲಿ..!
ಟ್ವಿಟರ್‍ನಲ್ಲಿ ತಾಳ್ಮೆ ಕಳೆದುಕೊಂಡ ಹರ್ಭಜನ್ ಸಿಂಗ್..!
ನಮ್ಮ ದೇಶದ ಸೈನಿಕರಿಗೆ ತರಬೇತಿ ನೀಡುವ ಏಕೈಕ ಮಹಿಳೆ ಸೀಮಾ ರಾವ್-ನಮ್ಮ ದೇಶ ಕಂಡ ಅದ್ಭುತ ಮಹಿಳೆ