ನಾವು ಹೊರಗಡೇ ಕಾಲಿಡುತ್ತಿದ್ದಂತೆ,ಸಾಧಾರಣವಾದ ಬಿಳಿಯ ಬಣ್ಣದ ಟಿ-ಶರ್ಟ್ ತನ್ನ ಬಣ್ಣವನ್ನು ಜಾದೂ ಶಕ್ತಿಯಿಂದ ಬದಲಾಯಿಸುವಂತಿದ್ದರೆ? ಅದೆಷ್ಟು ಚೆನ್ನಾಗಿರುತ್ತಿತ್ತು. ಅದನ್ನುಧರಿಸುತ್ತಾ ಖುಷಿ ಪಡುತ್ತಿದ್ದೆವು ಅಲ್ಲವೆ?ಆದ್ರೆ ಇದು ಕನಸಲ್ಲಿ ಮಾತ್ರ ಸಾಧ್ಯ ಅಂದ್ಕೊತೀರೇನು?ಅಲ್ಲ,ಇದು ಕನಸಲ್ಲ ನನಸಾಗಿರೋ ಒಂದು ಸತ್ಯ.ಗಿರ್ಗಿಟ್ ಎಂಬ ಕಂಪನಿಯೊಂದು ಇಂತಹ ಜಾದೂ ಟಿ-ಶರ್ಟ್ ನ್ನು ತಯಾರಿಸಿದೆ,ಇದನ್ನು ಧರಿಸಿ ನೀವು ಹೊರಗೆ ಸೂರ್ಯನ ಬೆಳಕಿಗೆ ಹೋದ ತಕ್ಷಣ ಇದರ ಬಣ್ಣ ಬದಲಾವಣೆಯಾಗುತ್ತದೆ.ಹಿಂದಿಯಲ್ಲಿ ಬಣ್ಣ ಬದಲಾಯಿಸುವ ಜೀವಿಗೆ (ಊಸರವಳ್ಳಿ)ಗಿರ್ಗಿಟ್ ಎಂದು ಹೆಸರು.ಇದರ ಹೆಸರಿಗೆ ಅನುಗುಣವಾಗಿ ಗಿರ್ಗಿಟ್ ಕಂಪನಿಯು ಡಿಸೈನ್ ಮಾಡಿರೋ ಈ ಟಿ-ಶರ್ಟ್ ನೀವು ಹೊರಗಡಿ ಇಟ್ಟಾಕ್ಷಣ ತನ್ನಷ್ಟಕ್ಕೆ ತನ್ನ ಬಣ್ಣದಲ್ಲಿ ಬದಲಾವಣೆಯನ್ನು ತೋರಿಸುತ್ತದೆ.
ಯುವ ವಸ್ತ್ರ ವಿನ್ಯಾಸಗಾರರ ತಂಡವು ಒಟ್ಟಾಗಿ ಸೇರಿ ಈ ಟಿ-ಶರ್ಟ್ ನ್ನು ಡಿಸೈನ್ ಮಾಡಿದೆ.ಹಿಮಾಂಶು ಠಾಕುರ್ ಈ ಕಂಪನಿಯ ನಿರ್ಮಾಣ ಮಾಡಿದವರಲ್ಲಿ ಪ್ರಮುಖ ವ್ಯಕ್ತಿ ಹಾಗೂ ಕಂಪನಿಯ M.D.ಇವರು ಹೇಳೊ ಪ್ರಕಾರ ನಮ್ಮ ಬಳಕೆದಾರರಿಗೆ ಒಂದು ಉತ್ತಮವಾದ ಸೇವೆಯನ್ನು ನೀಡುವುದರಿಂದ ಮಾತ್ರ ಯಾವುದೇ ಬ್ರಾಂಡ್ ನ್ನು ಯಶಸ್ವಿಗೊಳಿಸಲು ಸಾಧ್ಯ ಅನ್ನುತ್ತಾರೆ.ಒಂದು ಟಿ-ಶರ್ಟ್ ನ ಬೆಲೆಗೆ 2 ಟಿ-ಶರ್ಟ್ ನ್ನು ದೊರೆಯುವಂತೆ ಮಾಡಿರುವ ಈ ಕಂಪನಿಯ ಬುದ್ದಿವಂತಿಕೆಯನ್ನು ಮೆಚ್ಚಲೇಬೇಕು.
ಇವುಗಳ ಬೆಲೆಯು ಸುಮಾರು 855 ರಿಂದ 1,155 ರ ವರೆಗೂ ವಿಸ್ತರಿಸಿದ್ದು,ಇದನ್ನು ನಿಜಕ್ಕೂ ನಮ್ಮ ಕೈಗೆಟುಕುವ ವಸ್ತುವೆನ್ನಬಹುದು.ಅಲ್ಲವೆ??
- ಸ್ವರ್ಣಲತ ಭಟ್
POPULAR STORIES :
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!