ಉದ್ಯೋಗ ಸೃಷ್ಠಿ ಕತೆ ಬಿಟ್ಟಾಕಿ, ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ..! ದೇಶದಲ್ಲಿ, ಅದರಲ್ಲಿಯೂ ಬೆಂಗಳೂರಲ್ಲಿ ಐಟಿ ಕ್ಷೇತ್ರದಲ್ಲಿ ಉದ್ಯೋಗ ಸಿಗೋದು ಇನ್ನು ತುಂಬಾ ಕಷ್ಟ…!
ನಮ್ ಭಾರತದಲ್ಲಿ ಅತಿಹೆಚ್ಚು ಉದ್ಯೋಗ ಸೃಷ್ಠಿಯಾಗೋದು ಐಟಿ ಸೆಕ್ಟರ್‍ನಲ್ಲಿ. ಆದರೆ, ಇದೀಗ ಈ ವಲಯದಲ್ಲೇ ಉದ್ಯೋಗ ಕಡಿತ ಆಗ್ತಿದೆ ಎನ್ನೋದು ಆತಂಕಕಾರಿ ವಿಷಯ.
ಕಳೆದ ಹಣಕಾಸು ವರ್ಷದಲ್ಲಿ 60ಸಾವಿರ ಮಂದಿ ಹೊಸ ಉದ್ಯೋಗಗಳು ಸೃಷ್ಠಿಯಾಗಿದ್ದವು. ಆದರೆ ಪ್ರಸಕ್ತ ಹಣಕಾಸು ವರ್ಷದ ಆರೇ ಆರು ತಿಂಗಳಲ್ಲಿ ಐಟಿ ಕ್ಷೇತ್ರದಲ್ಲಿ 56 ಸಾವಿರ ಮಂದಿ ಐಟಿ ಕ್ಷೇತ್ರದ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರಂತೆ..!
ಯುಎಸ್‍ಎ ಎಚ್1ಬಿ ವೀಸಾ ನಿಯಂತ್ರಣ, ಕಂಪನಿಗಳು ಅನುಭವಿಸ್ತಾ ಇರೋ ನಷ್ಟ, ನೌಕರರಲ್ಲಿನ ಕೌಶಲ್ಯದ ಕೊರತೆ, ಸ್ವಯಂಚಾಲಿತ ವ್ಯವಸ್ಥೆ (ಆಟೋಮೇಷನ್) ಸೇರಿದಂತೆ ನಾನಾ ಕಾರಣಗಳು ಈ ಉದ್ಯೋಗ ಕಡಿತಕ್ಕೆ ಕಾರಣ ಎನ್ನಲಾಗುತ್ತಿದೆ.
2022ರ ವೇಳೆಗೆ 7ಲಕ್ಷದಷ್ಟು ಉದ್ಯೋಗಗಳು ಕಡಿತವಾಗಲಿವೆ ಎಂದು ಅಮೆರಿಕಾ ಸಂಶೋಧನಾ ಸಂಸ್ಥೆ ಎಚ್‍ಎಫ್‍ಎಸ್ ರಿಸರ್ಚ್ ವರದಿ ಮಾಡಿದೆ.
ಕಾಗ್ನಿಜಂಟ್, ಇನ್ಫೋಸಿಸ್, ವಿಪ್ರೋ, ಎಚ್‍ಸಿಐ, ಟೆಕ್ ಮಹೀಂದ್ರಾ, ಟಿಸಿಎಸ್, ಎಲ್ ಅಂಡ್ ಟಿ, ಟಾಟಾ ಮೋಟರ್ಸ್ ನಂತಹಯ ಪ್ರತಿಷ್ಠಿತ ಕಂಪನಿಗಳ ಉದ್ಯೋಗಿಗಳೂ ಸಹ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ…! ಕೆಲವೊಂದು ಕಂಪನಿಗಳಲ್ಲಿ ಈಗಾಗಲೇ ಒಂದಿಷ್ಟು ಜನ ಕೆಲಸದಿಂದ ವಜಾಗೊಂಡಿದ್ದಾರೆ.