ಭಾರತದಲ್ಲಿ ಜನಸಂಖ್ಯೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಹೋಗುತ್ತಿದ್ದು, ಜನಸಂಖ್ಯೆ ಪ್ರಮಾಣವನ್ನು ಹೇಗಪ್ಪಾ ನಿಯಂತ್ರಣ ಮಾಡೋದು ಅಂತ ಕೇಂದ್ರ ಸರ್ಕಾರ ಪ್ಲಾನ್ ಮಾಡ್ತಾ ಇದ್ರೆ, ರಾಜಸ್ಥಾನ ಸರ್ಕಾರ ಮಾತ್ರ ಅದಕ್ಕೊಂದು ಪರ್ಯಾಯ ಮಾರ್ಗ ಕಂಡು ಕೊಂಡಿದೆ. ಅದೇನಂದ್ರೆ ಮದುವೆಯಾದ ನವದಂಪತಿಗಳಿಗೆ ಸರ್ಕಾರ ಉಡುಗೊರೆಯಾಗಿ ಕಾಂಡೋಮ್ ಗಿಫ್ಟ್ ನೀಡಲು ಸಿದ್ದತೆ ನಡೆಸಿದೆ. ದೇಶದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನಸಂಖ್ಯೆ ನಿಯಂತ್ರಿಸುವತ್ತ ಗಮನ ಹರಿಸಿರುವ ರಾಜಸ್ಥಾನ ಸರ್ಕಾರ ಕಾಂಡೋಮ್ ವಿತರಣೆಯ ಕಾರ್ಯಕ್ಕೆ ಕೈ ಹಾಕಿದೆ. ಇದಕ್ಕಾಗಿ ಸರ್ಕಾರ ಒಟ್ಟು 14 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು ಆಶಾ ಕಾರ್ಯಕರ್ತರ ಸಹಕಾರದಿಂದ ದಂಪತಿಗಳಿಗೆ ಗಿಫ್ಟಾಗಿ ಇದನ್ನು ನೀಡಲಿದೆ. ದಂಪತಿಗಳಿಗೆ ಕಾಂಡೋಮ್ , ಗರ್ಭ ನಿರೋಧಕ ಮಾತ್ರೆಯ ಯುನಿಟ್, ತುರ್ತು ಗರ್ಭ ನಿರೋಧಕ ಮಾತ್ರೆಯ ಮೂರು ಯುನಿಟ್, ಎರಡು ಗರ್ಭಧಾರಣೆ ಟೆಸ್ಟ್ ಕಿಟ್ಗಳನ್ನು ಸಹ ಈ ಸಮಯದಲ್ಲಿ ನೀಡಲಿದ್ದಾರೆ. ಇಷ್ಟೆ ಅಲ್ಲದೆ ಕಿಟ್ನಲ್ಲಿ ಒಂದು ಟವೆಲ್ ಸೆಟ್, ಬಾಚಣಿಕೆ, ನೇಲ್ ಕಟರ್, ಹಣೆ ಬೊಟ್ಟು, ಕರ್ಚೀಫ್, ಹಾಗೂ ಒಂದು ಸಣ್ಣ ಗಾಜಿನ ಶೀಶೆಯು ಇರಲಿದೆ. ಇನ್ನು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳ ಒಟ್ಟು 145 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಈ ಎಲ್ಲಾ ಜಿಲ್ಲೆಯ ದಂಪತಿಗಳಿಗೂ ಕೂಡ ಕಿಟ್ ವಿತರಣೆಯ ಗುರಿ ಹೊಂದಿದೆ. ಇದರಲ್ಲಿ ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳು ಸೇರಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಸ್ಯಾಂಡಲ್ವುಡ್ ಕ್ವೀನ್ನ ಹಿಂದಿಕ್ಕಿದ್ದಾಳಂತೆ ಈ ನಟಿಮಣಿ?
ನೊಬೆಲ್ ವಿಜೇತರಿಗೆ 100 ಕೋಟಿ ಬಂಪರ್ ಆಫರ್..!
ಕ್ಯಾಪ್ಟನ್ ಕೂಲ್ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾದ್ರೂ ಯಾಕೆ..?
ಹೊಸ 2000ರೂ. ನೋಟಿನಲ್ಲಿ ಕಾಣೆಯಾಗಿದ್ದಾರೆ ಗಾಂಧೀಜಿ..!!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಮುಂದೆ ಮಳೆ ಬಂದ್ರೂ ಪಂದ್ಯ ರದ್ದಾಗಲ್ಲ..!!






