ಸಾಭೀತಾಯ್ತು ಕೃಷ್ಣಮಠದ ಪಾರ್ಕಿಂಗ್ ಅವ್ಯವಹಾರ…!

Date:

ಶ್ರೀ ಕೃಷ್ಣ ಪರಿಸರ ಪ್ರತಿಷ್ಠಾನದ ಗೋಲ್ಮಾಲ್ ವಿರುದ್ಧ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಕೆಲವು ದಿನಗಳ ಹಿಂದೆ ಗರಂ ಆಗಿದ್ದು ಗೊತ್ತೇ ಇದೆ. ಗೋಲ್ಮಾನ್ ವಿಷಯಕ್ಕೆ ಲಕ್ಷ್ಮೀ ತೀರ್ಥರು ಸಿಡಿದೆದ್ದಿದ್ರು, ಜೊತೆಗೆ ಕೃಷ್ಣ ಮಠದ ಪಾರ್ಕಿಂಗ್ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಅಂಗಡಿಗಳನ್ನು ಜೆಸಿಬಿ‌ ತಂದು ಒಡೆಸಿದ್ದರು.


ಇದೀಗ ಈ ಅಕ್ರಮದ ಹಿಂದೆ ಪೇಜಾವರ ಶ್ರೀಗಳ ಆಪ್ತರೇ‌ ಇದ್ದರು ಎಂಬುದು ಸಾಭೀತಾಗಿದ್ದು , ಪಾರ್ಕಿಂಗ್ ಸ್ಥಳದ ಹೊಣೆ ಶಿರೂರು ಸ್ವಾಮೀಜಿಯವರ ಹೆಗಲೇರಿದೆ.


ಪಾರ್ಕಿಂಗ್ ರಶೀದಿ ಪುಸ್ತಕವನ್ನು ನಕಲು ಮಾಡಲಾಗಿತ್ತು. ತಪಾಸಣೆ ವೇಳೆ ಒಂದೇ ಸಂಖ್ಯೆ‌ ಇರುವ ರಶೀದಿ ಪುಸ್ತಕಗಳು ತಪಾಸಣೆ ವೇಳೆ ಸಿಕ್ಕಿದೆ.


ಶ್ರೀಮಠದ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಂದು‌ ಶ್ರೀಕೃಷ್ಣ ಮಠ ಪರಿಸರ ಸೇವಾ ಪ್ರತಿಷ್ಠಾನದ ಸಭೆ ನಡೆಯಿತು.  ಪೇಜಾವರ ಶ್ರೀ ಹಾಗೂ ಪರ್ಯಾಯ ಪಲಿಮಾರು ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.


ಸಭೆಯ ನಂತರ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಮಾತಾಡಿ, ಪಾರ್ಕಿಂಗ್ ಹಣ ಸಂಗ್ರಹ ಉಸ್ತುವಾರಿಯನ್ನು ಉದಯ ಸುಬ್ರಹ್ಮಣ್ಯ ಅವರಿಗೆ ವಹಿಸಲಾಗಿತ್ತು. ಅವರು ಒಂದೇ ರೀತಿ ನಂಬರ್ ಇರೋ ರಶೀದಿ ಪುಸ್ತಕ ಇಟ್ಟುಕೊಂಡು ಅವ್ಯವಹಾರ ನಡೆಸಿದ್ದಾರೆ ಎಂದು ಶಿರೂರು ಸ್ವಾಮೀಜಿ ಮಾಡಿದ್ದರು. ಇದೀಗ ಉದಯ ಅವರನ್ನು ತೆಗೆದು ಹಾಕಿ, ಜವಬ್ದಾರಿಯನ್ನು ಶೀರೂರು‌ ಶ್ರೀಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.


ಪಾರ್ಕಿಂಗ್ ಜಾಗದಲ್ಲಿರು ಎರಡು ಅಂಗಡಿಗಳನ್ನು ತೆರವು ಮಾಡಲು ಸಹ ಆದೇಶಿಸಲಾಗಿದೆ ಎಂದರು.

Share post:

Subscribe

spot_imgspot_img

Popular

More like this
Related

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಹಬ್ಬ...

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ ಮಳೆಯ...