ಯುವತಿ ತನ್ನ ಸ್ನೇಹಿತನ ಜೊತೆ ಸಬ್ ಅರ್ಬನ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕೆಲ ಕಿಡಿಗೇಡಿ ಪ್ರಯಾಣಿಕರು ಆಕೆಯ ಬಟ್ಟೆ ಎಳೆದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತೀರೋ ಯುವತಿ ಸ್ನೇಹಿತನ ಜೊತೆ ಸೀಲ್ಹಾಹ್ ಸ್ಟೇಷನ್ ನಿಂದ ಜನರಲ್ ಕಂಪಾಟ್ಮೆಂಟ್ ನಲ್ಲಿ ಪ್ರಯಾಣಿಸುತ್ತಿರುವಾಗ ಈ ಘಟನೆ ನಡೆದಿದೆ.
ಟ್ರೈನ್ ನಲ್ಲಿ ಸಾಕಷ್ಟು ಜನ ಇದ್ದರು. ಒಬ್ಬ ವ್ಯಕ್ತಿಯ ಪಕ್ಕದಲ್ಲಿ ಕುಳಿತುಕೊಳ್ಳಲು ಸ್ವಲ್ಪ ಜಾಗವಿತ್ತು. ಅಲ್ಲಿ ಜರಗಿ ಕುಳಿತುಕೊಳ್ಳಲು ಯುವತಿ ಹೇಳಿದಾಗ ಆ ವ್ಯಕ್ತಿ ಒಪ್ಪಲಿಲ್ಲ. ಸ್ವಲ್ಪ ಜಾಗದಲ್ಲೇ ಅಡ್ಜೆಸ್ಟ್ ಮಾಡಿ ಯುವತಿ ಹಾಗೂ ಆಕೆಯ ಸ್ನೇಹಿತ ಕುಳಿತಾಗ ‘ಇದು ಮಹಿಳೆಯರ ಕಂಪಾರ್ಟ್ಮೆಂಟ್ ಅಲ್ಲ’ ಎಂದು ನಿಂಧಿಸಿದ ಕೆಲ ಕಿಡಿಗೇಡಿ ಪ್ರಯಾಣಿಕರು ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದ್ದು , ಯುವತಿ ಆ ವ್ಯಕ್ತಿಯ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ಆ ಅಪರಿಚಿತನ ವಿರುದ್ಧ ದೂರು ದಾಖಲಾಗಿದ್ದು, ರೈಲ್ವೆ ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದಾರೆ ಎಂದು ವರದಿ ಯಾಗಿದೆ.