ಜಗತ್ತನ್ನು ಸುತ್ತುವುದು ಪ್ರತಿಯೊಬ್ಬರಿಗೂ ಇಷ್ಟದ ಸಂಗತಿ. ಕೆಲವರು ಬೈಕ್, ಕಾರುಗಳ ಮೇಲೆಯೇ ವಿಶ್ವಪರ್ಯಟನೆ ಮಾಡಿದ ಸಾಧನೆಗೆ ಪಾತ್ರರಾಗಿದ್ದರು. ಆದರೆ ಹಳೆಯ ಡಕೋಟಾ ವಾಹನದಲ್ಲಿ ಅದೂ ಕೂಡಾ ದಿನಕ್ಕೆ ಕೇವಲ 8 ಡಾಲರ್ ಖರ್ಚಿನಲ್ಲಿ ವಿಶ್ವಪರ್ಯಟನೆ ಮಾಡುವ ಮೂಲಕ ಇಲ್ಲೊಂದು ಕುಟುಂಬ ಅಚ್ಚರಿ ಮೂಡಿಸಿದೆ.
ಪೋಲೆಂಡ್ ಮೂಲದ ಕರೋಲ್ ಲೆವಾಂಡೋಸ್ಕಿ ಮತ್ತು ಅಲೆಕ್ಸಾಂಡ್ರಾ ಸುಸಾಜಿಕ್ ಎಂಬ ದಂಪತಿ 6 ವರ್ಷಗಳ ಅಂತರದಲ್ಲಿ ಸುಮಾರು 50 ದೇಶಗಳನ್ನು ಸುತ್ತಿ ಸುದ್ದಿ ಮಾಡಿದ್ದಾರೆ. ಇದಕ್ಕಾಗಿ ಸುಮಾರು 150,000 ಕಿಲೋ ಮೀಟರ್ ಕ್ರಮಿಸಿದ್ದಾರೆ..! ವಿಶೇಷವೆಂದರೆ ಇವರು ಬಜೆಟ್ ಹಾಕಿಕೊಂಡು ವಿಶ್ವ ಪರ್ಯಟನೆ ಮಾಡುತ್ತಿದ್ದು, ದಿನವೊಂದಕ್ಕೆ ಕೇವಲ 8 ಡಾಲರ್ ಮಾತ್ರ ಖರ್ಚು ಮಾಡುತ್ತಾರೆ..!
ಇವರು ತಮ್ಮ ಕಾರಿಗೆ ಅಗತ್ಯವಾದ ಡೀಸೆಲ್ ನ್ನು ಹಾಕಿಸುತ್ತಾರೆ. ಇವರು ತೆಗೆದ ಫೋಟೋಗಳನ್ನು ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸುತ್ತಾರೆ. ಕೆಲವೊಮ್ಮೆ ಅವರ ಬ್ಲಾಗ್ ನೋಡುವ ಜನರು ಅಗತ್ಯ ಸಹಾಯ ಮಾಡುತ್ತಾರೆ..! ಅದರಲ್ಲೂ ಹೆಚ್ಚಾಗಿ ಡೀಸೆಲ್ ಖರ್ಚನ್ನು ಅವರೇ ನೋಡಿಕೊಳ್ಳುತ್ತಾರೆ. ನಂತರ ಅದಕ್ಕೆ ಯಾವುದಾದರೂ ಸಮಸ್ಯೆ ಎದುರಾದರೆ ಅದನ್ನು ತಾವೇ ರಿಪೇರಿ ಮಾಡಿಕೊಳ್ಳುತ್ತಾರೆ. ಅಡುಗೆಯನ್ನೂ ತಾವೇ ಮಾಡಿಕೊಳ್ಳುವ ಮೂಲಕ ಖರ್ಚು ಕಡಿಮೆ ಮಾಡಲು ಯತ್ನಿಸುತ್ತಾರೆ..!