CPY ಗೆಲುವಿನ ಬಳಿಕ ಹೊಳೆ ಆಂಜನೇಯನಿಗೆ ಹರಕೆ ತೀರಿಸಿದ ಶೀಲಾ ಯೋಗೇಶ್ವರ್

Date:

CPY ಗೆಲುವಿನ ಬಳಿಕ ಹೊಳೆ ಆಂಜನೇಯನಿಗೆ ಹರಕೆ ತೀರಿಸಿದ ಶೀಲಾ ಯೋಗೇಶ್ವರ್

ಮಂಡ್ಯ: ಉಪಚುನಾವಣೆ ನಡೆದ ರಾಜ್ಯದ ಮೂರೂ ಕ್ಷೇತ್ರಗಳಲ್ಲೂ ಆಡಳಿತರೂಢ ಕಾಂಗ್ರೆಸ್‌ ಪಕ್ಷ ಭರ್ಜರಿ ಗೆಲುವು ದಾಖಲಿಸಿದೆ. ಚನ್ನಪಟ್ಟಣದ ನಗರ ಪ್ರದೇಶದಲ್ಲಿ ಭರ್ಜರಿ ಗೆಲುವು ಪಡೆದ ಯೋಗೇಶ್ವರ್ ಅವರು, ಗ್ರಾಮೀಣ ಪ್ರದೇಶಗಳಲ್ಲೂ ಕಮಾಲ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಿ.ಪಿ ಯೋಗೇಶ್ವರ್‌ ಪತ್ನಿ ಮದ್ದೂರಿನ ಹೊಳೆ ಆಂಜನೇಯ ದೇಗುಲಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ
ಚುನಾವಣೆ ಪೂರ್ವದಲ್ಲೇ ದೇಗುಲಕ್ಕೆ ಭೇಟಿ ನೀಡಿದ್ದ ಕುಟುಂಬ ಸಿಪಿವೈ ಗೆಲುವಿಗಾಗಿ ಹರಕೆ ಕಟ್ಟಿಕೊಂಡಿತ್ತು. ಅದರಂತೆ ದೇವಸ್ಥಾನಕ್ಕೆ ಬಂದು ಹೊಳೆ ಆಂಜನೇಯನಿಗೆ ಒಂದೂಕಾಲು ರೂಪಾಯಿ ಕಟ್ಟಿ ಹರಕೆ ತೀರಿಸಿದ್ದಾರೆ. ಬಳಿಕ ದೀಪ ಹಚ್ಚಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಶೀಲಾ, ನಾವು ಸಾಮಾನ್ಯ ಕುಟುಂಬದಿಂದ ಬಂದವ್ರು. ಪತಿಯ ಜನಸೇವೆ ಗುರುತಿಸಿ ಜನ ಕೈ ಹಿಡಿದಿದ್ದಾರೆ. ಎರಡು ಸರಿ ಸೋಲು ಅನುಭವಿಸಿದ್ವಿ ಈ ಬಾರಿ ಭರವಸೆ ಇತ್ತು. ಚನ್ನಪಟ್ಟಣದ ಜನ ತಮ್ಮ ಮನೆ ಮಗನನ್ನ ಗೆಲ್ಲಿಸಿದ್ದಾರೆ. ನಮ್ಮದೇ ಸರ್ಕಾರ ಇರೋದ್ರಿಂದ ಜನ ಸೇವೆ ಮಾಡಬಹುದು. ಸಾಕಷ್ಟು ಅಭಿವೃದ್ಧಿ ಬಗ್ಗೆ ಜನರ ನಿರೀಕ್ಷೆ ಇದೆ ಎಂದರು. ಇನ್ನೂ ಇಡೀ ರಾಜ್ಯದ ನಿರೀಕ್ಷೆ ಹೆಚ್ಚಿಸಿದ್ದ ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್‌ ದಿಗ್ವಿಜಯ ಸಾಧಿಸಿದ್ದಾರೆ. ನಿಖಿಲ್‌ ಕುಮಾರಸ್ವಾಮಿ ಮೂರನೇ ಬಾರಿಗೆ ಸೋತು ಸೋಲಿನ ಸರದಾರ ಎನಿಸಿಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...