ಹಾಟ್ ನ್ಯೂಸ್..! ಈ ಪಬ್‍ನಲ್ಲಿ ಕ್ರಾಫ್ಟ್ ಬಿಯರ್‍ನ ಬೆಲೆ ಕೇವಲ 22ರೂ..!

Date:

ಅಬ್ಬಾ ವೀಕೆಂಡ್ ಬಂತಪ್ಪಾ..! ಸಖತ್ ಜೋಷ್ ಆಗಿರ್ಬೇಕು.. ಎಲ್ಲಾದ್ರೂ ಒಂದು ದೊಡ್ಡ ಪಬ್‍ಗೆ ಹೋಗಿ ಸಖತ್ ಜಾಲಿ ಮಾಡಿ ಬರ್ಬೇಕು ಅಂತ ನೀವು ಐಡಿಯಾ ಹಾಕೊಂಡ್ರೆ..? ಅದೇ ರೀತಿಯಾಗಿ ನಿಮ್ಮ ಪಾಕೇಟ್ ಕೂಡ ಗಟ್ಟಿಯಾಗಿರ್ಬೇಕು.. ಯಾಕಂದ್ರೆ ಒಂದು ಬಾರಿ ನೀವು ಪಬ್ ಒಳಗೆ ಎಂಟ್ರಿ ಕೊಟ್ರೆ ನಿಮ್ಮ ಪಾಕೇಟ್‍ನಲ್ಲಿರೋ ಫುಲ್ ಮನಿ ಗೋತ ಒಡೊಯೋದಂತೂ ಸತ್ಯ..
ಆದ್ರೆ ನಿಮಗೆ ನಾವೀಗ ಹೇಳೋ ವಿಷಯ ಕೇಳುದ್ರೆ ಒಂದು ಕ್ಷಣ ನಿಮ್ಮ ಉಸಿರು ನಿಂತೋಗೊದಂತೂ ಖಂಡಿತ.. ಇಲ್ಲೋಂದು ಕಡೆ ನಿಮ್ಮ ಇಷ್ಟವಾದ ಬಿಯರ್‍ನ್ನು ಕೇವಲ 22ರೂ ಗೆ ಮಾರಟ ಮಾಡ್ತಾ ಇದಾರೆ.. ಅದೂ ಕೂಡ ಪಬ್‍ನಲ್ಲಿ..! ಎಲ್ಲಿ ಅಂತ ಕೇಳ್ತೀರಾ..? ಇಲ್ಲಿದೆ ನೋಡಿ ಅದರ ಸಂಪೂರ್ಣ ವಿವರ.
ಕೇವಲ 22ರೂ.ಗೆ ಯಾವ ಮುಟ್ಟಾಳ ಬಿಯರ್ ಕೊಡ್ತಾನೆ ರೀ ಅದೂ ಪಬ್‍ನಲ್ಲಿ ಅಂತ ನೀವು ನಿಮ್ಮ ಮನಸ್ಸಿನಲ್ಲಿ ಬೈಕೋಳ್ತಾ ಇದ್ರೆ ಅದು ನಿಮ್ಮ ತಪ್ಪು. ಮುಂಬೈನ ಅಂಧೇರಿಯಲ್ಲಿರುವ ಪ್ರಖ್ಯಾತ ಪಬ್‍ಗಳಲ್ಲಿ ಒಂದಾದ ಬ್ರೇವ್‍ಬೋಟ್ ಮತ್ತು ಪಬ್ ಬ್ರೇವರಿಯಲ್ಲಿ ಸೆ.29ರಂದು ಅಂದರೆ ನಾಳೆ ತನ್ನ ಎರಡನೇ ವಾರ್ಷಿಕ ಸಮಾರಂಭವನ್ನು ಬಹಳ ಅದ್ಧೂರಿಯಾಗಿ ಆಚರಿಸುವ ಜೊತೆಗೆ, ಬಹಳ ವಿಶಿಷ್ಟವಾಗಿಯೂ ಆಚರಿಸಲಾಗ್ತಾ ಇದೆ ನೋಡಿ.. ಈ ವಾರ್ಷಿಕೋತ್ಸವದಲ್ಲಿ ತಮ್ಮ ಗ್ರಾಹಕರನ್ನು ಸಂತೋಷ ಪಡಿಸುವ ಉದ್ದೇಶದಿಂದ ತಮ್ಮ ಎಲ್ಲಾ ಮೆನುವನ್ನೂ 222ರೂ.ಗೆ ಸೀಮಿತಗೊಳಿಸಿದೆ..! ಆಶ್ಚರ್ಯ ಆಗ್ತಾ ಇದೆ ಅಲ್ವಾ..
ಇನ್ನು ಮಧ್ಯ ಪ್ರೀಯರಿಗಂತೂ ನಾಳೆ ಬ್ರೇವರಿಯಲ್ಲಿ ಈ ವಿಶಿಷ್ಟ ದಿನದಂದು 300ಮಿ.ಲಿ ಬಿಯರ್‍ಗೆ ಕೇವಲ 22ರೂ. ನಿಗಧಿ ಮಾಡಿದೆ. ಈ ಒಂದು ಸದಾವಕಾಶ ನಾಳೆ ರಾತ್ರಿ 8 ರಿಂದ 10ರ ವರೆಗೆ ಮಾತ್ರ ಇರಲಿದೆ. ಆದ್ದರಿಂದ ನಾಳೆ ನಿಮ್ಮ ಪ್ಲಾನ್ ಬದಲಾಯಿಸಿಕೊಂಡು ಒಂದು ದಿನ ಈ ಪಬ್‍ಗಳಿಗೆ ಹೋಗಿ ಸಖತ್ ಎಂಜಾಯ್ ಮಾಡೋದು ಒಳ್ಳೇದು ನೋಡಿ..
ಆದ್ರೂ ನಿಮಗೆ ಮನದಲ್ಲಿ ಒಂದು ಅನುಮಾನ ಕಾಡ್ತಾ ಇದೆ ಅನ್ಸತ್ತೆ ಅಲ್ವಾ.. ಅಲ್ಲಾ.. ಯಾರಾದ್ರೂ 22ರೂ.ಗೆ ಬಿಯರ್ ಕೊಡ್ತಾನಾ..? ಅಕಸ್ಮಾತ್ ಕೊಟ್ರೂ ಕೋಡ ಯಾವುದೋ ಲೋಕಲ್ ಬ್ರಾಂಡ್ ಕೊಡ್ತಾರೆ.. ಅದನ್ನ ಕುಡಿಯೋಕೆ ನಮ್ಮ ಟೈಮ್ ವೇಸ್ಟ್ ಮಾಡ್ಬೇಕಾ..? ಅಂತ.. ಇನ್ಫ್ಯಾಕ್ಟ್ ಈ ಪಬ್ ನಾಳೆ ನೀಡೋ ಎಲ್ಲಾ ಬಿಯರ್‍ಗಳು ಸಖತ್ ಕಾಸ್ಟ್ಲಿ ರೇಟ್ ಕಂಡ್ರೀ.. ಎಲ್ಲಾ ಬಿಯರ್ ಫುಲ್.. ಬ್ರಾಂಡೆಡ್ ಗೊತ್ತಾ..? ಮೋಜೋ ರೈಸಿಂಗ್, ಸಿಡರ್, ಬೋಟ್ವೋಕ್ ಆರೆಂಜ್ ಅಂಡ್ ಬ್ಲಾಕ್ ಮಾಂಬಾ ದಂತಹ ಫುಲ್ ಬ್ರಾಂಡೆಡ್ ಬಿಯರನ್ನೇ ಅಷ್ಟು ಚೀಪಾಗಿ ಕೊಡ್ತಾ ಇದಾರೆ.. ಇನ್ನು ಬಿಯರ್ ಪಕ್ಕ ಸೈಡ್ಸ್ ಬೇಕಪ್ಪಾ ಅಂತಾದ್ರೆ ಅದೂ ಕೂಡಾ ನಾಳೆ ಫುಲ್ ಚೀಪಾಗಿ ಸಿಗತ್ತೆ. ಅದೂ ಕೂಡ ಸಖತ್ ಸ್ಪೆಷಲ್ ಐಟಮ್.. ಪಿರಿಪಿರಿ ಚಿಕನ್ ಅಥವಾ ಫೈರ್‍ಸ್ಟಾರರ್.. ಸೋ ಇನ್ಯಾಕ್ರೀ ಯೋಚ್ನೆ ಮಾಡ್ತಾ ಇದೀರಾ ನಾಳೆ ನಿಮ್ಮ ಎಲ್ಲಾ ಕೆಲಸಕ್ಕೂ ಬ್ರೇಕ್ ಹಾಕಿ ನಾಳೆ ರಾತ್ರಿ ಫುಲ್ ಟಿಪ್‍ಟಾಪ್ ಆಗಿ ಬ್ರೇವರಿ ಪಬ್‍ನಲ್ಲಿ ನಿಮ್ಮ ಇಷ್ಟವಾದ ಬಿಯರ್ ಜೊತೆ ಸಖತ್ ಮೂಡ್‍ನಲ್ಲಿರಿ… ಹಾ.. ನಿಮಗೆ ಅಡ್ರಸ್ ಗೊತ್ತಿಲ್ಲವಾ..? ಅದನ್ನೂ ನಾವೇ ಕೊಡ್ತೀವಿ ತಗೊಳ್ಳಿ.
ಪಬ್ ಹೆಸರು: ಬ್ರೇವ್‍ಬೋಟ್ ಮತ್ತು ಪಬ್ ಬ್ರೇವರಿ.
ಸ್ಥಳ: ಜಿ01 ಮತ್ತು 101, ಮೋರಿಯಾ ಲ್ಯಾಂಡ್‍ಮಾರ್ಕ್ 1, ನ್ಯೂ ಲಿಂಕ್ ರೋಡ್, ಅಂಧೇರಿ ಲೊಖಂದ್ವಾಲಾ, ಅಂಧೇರಿ.
ದಿನಾಂಕ ಮತ್ತು ಸಮಯ: 29 ಸೆಪ್ಟೆಂಬರ್, ರಾತ್ರಿ 8 ರಿಂದ 10.

Like us on Facebook  The New India Times

POPULAR  STORIES :

ಬಿಗ್ ಬಾಸ್ ಮನೆಯ ರಹಸ್ಯ ಲೀಕ್..!

ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?

ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?

ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!

ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!

ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!

ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...