ಅದೆಷ್ಟೋ ಕ್ರಿಕೆಟಿಗರ ಮಕ್ಕಳು ತಮ್ಮ ತಂದೆಯ ಹಾದಿಯಲ್ಲಿಯೇ ಬೆಳೆಯಲು ಹೊರಟಿದ್ದಾರೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್, ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಮಗ ಸಮಿತ್ ದ್ರಾವಿಡ್, ವೆಸ್ಟ್ ಇಂಡೀಸ್ ನ ಶಿವನಾರಾಯಣ್ ಚಂದ್ರಪಾಲ್ ಅವರ ಮಗ ತೇಜ್ ನಾರಾಯಣ್, ದಕ್ಷಿಣ ಆಫ್ರಿಕಾದ ಮಕಾಯ್ ಎನ್ ಟಿನಿ ಪುತ್ರ ಮೊದಲಾದವರನ್ನಿಲ್ಲಿ ಉದಾಹರಿಸಬಹುದು.
ಇದೀಗ ಇವರ ಸಾಲಿಗೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರ ಮಗ ಸೇರಲಿದ್ದಾರೆ.
ಸನತ್ ಜಯಸೂರ್ಯ ಅವರ ಮಗ ರೇಣುಕಾ ಜಯಸೂರ್ಯ ತನ್ನ ಬ್ಯಾಟಿಂಗ್ ಸಾಮಾರ್ಥ್ಯ ಏನೆಂಬುದನ್ನು ಸಾಬೀತು ಪಡಿಸ್ತಿದ್ದಾರೆ. ಮಗ ಕ್ರಿಕೆಟ್ ಅಭ್ಯಾಸ ಮಾಡುವ ವೀಡಿಯೋವೊಂದನ್ನು ಸನತ್ ಜಯಸೂರ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
Dad N Son!What a unique video!#Admin_Mahesh
Posted by Sanath Jayasuriya on Wednesday, July 25, 2018