35ವರ್ಷದ ಶಿಕ್ಷಕಿಯನ್ನು ಪ್ರೀತಿಸಿದ 18 ವರ್ಷದ ಯುವತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ ತಾಯಿಯನ್ನೇ ಕೊಂದ ಘಟನೆ ಘಜಿಯಾಬಾದ್ ನ ಕವಿನಗರದಲ್ಲಿ ನಡೆದಿದೆ.
ಯುವತಿ 35ವರ್ಷದ ತನ್ನ ಶಿಕ್ಷಕಿಯನ್ನು ಪ್ರೇಮಿಸಿದ್ದಾಳೆ. ಇದಕ್ಕೆ ತಾಯಿ ಅಡ್ಡಪಡಿಸಿದ್ದಾರೆ.ಇದರಿಂದ ಕುಪಿತಗೊಂಡ ಆಕೆ ಕಬ್ಬಿಣದ ರಾಡಿನಿಂದ ತಾಯಿಯ ತಲೆಗೆ ಹೊಡೆದು ಪರಾರಿಯಾಗಿದ್ದಾಳೆ. ಆಗ ಶಾಲೆಯಿಂದ ಬಂದ ಕಿರಿಯ ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ನೋಡಿ ತಂದೆಗೆ ಕರೆಮಾಡಿದ್ದಾಳೆ. ಪತಿ ಮನೆಗೆ ಬಂದು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಅಲ್ಲಿಂದ ದೆಹಲಿಗೆ ರವಾನಿಸಲಾಯಿತಾದರೂ ಬದುಕುಳಿಯಲಿಲ್ಲ.
ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಗಳು ಶಿಕ್ಷಕಿಯೊಂದಿಗೇ ಹೋಗಿರಬೇಕು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.