ಒಡಿಶಾದ ಕೆಯೊಂಜ್ಹಾರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಯುವಕನ ಮರ್ಮಾಂಗ ಕತ್ತರಿಸಿದ್ದು, ಅನೈತಿಕ ಸಂಬಂಧವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.
ಬಡೌಗಾನ್ ಗ್ರಾಮದ 24 ವರ್ಷದ ಕಮಲ ಪತ್ರ ಎಂಬ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಜರಾಬೆದ ಗ್ರಾಮದ ನಿವಾಸಿ ರಾಜೇಂದ್ರ ನಾಯಕ್ (24) ಬಡೌಗಾನ್ ಗ್ರಾಮದ ಕಮಲ ಪತ್ರ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ರಾಜೇಂದ್ರ ಚೆನ್ನೈ ಮೂಲದ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಅಲ್ಲದೇ ಅಲ್ಲಿಯೂ ಸಹ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಊರಿಗೆ ಬಂದಾಗಲೆಲ್ಲಾ ಕಮಲಾಳ ಮನೆಗೆ ಹೋಗುತ್ತಿದ್ದ.
ಕಳೆದ ಮಂಗಳವಾರ ಮತ್ತು ಬುಧವಾರವೂ ಕಮಲಾಳ ಮನೆಗೆ ತೆರಳಿದ್ದ. ಈ ವೇಳೆ ಚೆನ್ನೈ ಮಹಿಳೆಯೊಂದಿಗೆ ಮಾತನಾಡುತ್ತಿರುವಾಗ ಕಮಲಾ ಕೈಗೆ ಸಿಕ್ಕಿಬಿದ್ದಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಇದರಿಂದ ಸಿಟ್ಟಿಗೆದ್ದ ಕಮಲ ಮನೆಯಲ್ಲಿ ಮಲಗಿದ್ದ ರಾಜೇಂದ್ರನ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ರಾಜೇಂದ್ರ ನಾಯಕ್ ಚಿಕಿತ್ಸೆ ಪಡೆಯುತ್ತಿದ್ದು , ಕಮಲಾ ಪೊಲೀಸರ ಅತಿಥಿ ಆಗಿದ್ದಾಳೆ.