ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬೇಕಿಲ್ಲ. ಇನ್ನು ಮುಂದೆ ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ದೂರು ನೀಡಬಹುದು. ಇದರಿಂದ ಸಂತ್ರಸ್ತರು ಪೊಲೀಸರು ಕೇಳುವ ಪ್ರಶ್ನೆಗಳಿಂದ ಮುಜುಗರಕ್ಕೆ ಒಳಗಾಗುವುದು, ಸಂಕೋಚದಿಂದ ದೂರು ನೀಡಲು ಹಿಂದೆಸರಿಯುವುದು ಕೂಡ ತಪ್ಪಲಿದೆ.
ಕೇಂದ್ರ ಗೃಹಸಚಿವಾಲಯ ಇದಕ್ಕಾಗಿ ಹೊಸ ಪೋರ್ಟಲ್ ಮಾಡಿದ್ದು, ಗೃಹಸಚಿವ ರಾಜ್ ನಾಥ್ ಸಿಂಗ್ ಈ ಹೊಸ ಪೋರ್ಟಲ್ ಬಿಡುಗಡೆ ಮಾಡಿದ್ದಾರೆ.
ಇದರಲ್ಲಿ ದೂರುದಾರರ ಹೆಸರು,ವಿಳಾಸ, ಭಾವಚಿತ್ರ, ಬೆರಳಿನ ಗುರುತನ್ನು ದಾಖಲಿಸಿಕೊಳ್ಳುತ್ತಾರೆ. ಈ ಮಾಹಿತಿ ಇಲಾಖೆಗೆ ಮಾತ್ರ ಸಿಗಲಿದ್ದು, ಗೌಪ್ಯವಾಗಿಡುತ್ತಾರೆ.
ಈಗ ಹೊರತಂದಿರುವ ಪೋರ್ಟಲ್ ನಲ್ಲಿ
ಮಕ್ಕಳ ಅಶ್ಲೀಲ ದೃಶ್ಯ ಸೆರೆಹಿಡಿಯುವ ಹಾಗೂ ಲೈಂಗಿಕ ದುರುಪಯೋಗ, ಅತ್ಯಾಚಾರ, ಗ್ಯಾಂಗ್ರೇಪ್ಗೆ ಸಂಬಂಧಿಸಿದ ದೂರುಗಳನ್ನು ಸಂತ್ರಸ್ತರು ತಮ್ಮ ಮೊಬೈಲ್ನಿಂದಲೇ ನೇರವಾಗಿ ದೂರು ಸಲ್ಲಿಸಬಹುದಾಗಿದೆ. ಇದರ ಜೊತೆಗೆ ಲೈಂಗಿಕ ಅಪರಾಧಿಗಳ ಡಾಟಾಬೇಸ್ ಹೊಂದಿರೋ ಪೋರ್ಟಲ್ನ್ನು ಹೊರತರಲು ಗೃಹ ಸಚಿವಾಲಯ ನಿರ್ಧರಿಸಿದೆ.