ಲೈಂಗಿಕ ಕಿರುಕುಳ , ಅತ್ಯಾಚಾರದಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಸರಿಯಾದ ಶಿಕ್ಷೆ ನೀಡಲಾಗುತ್ತಿಲ್ಲ. ಕಾನೂನನ್ನು ಕಠಿಣ ಮಾಡಿ, ಹೆಚ್ಚು ಶಿಕ್ಷೆ ನೋಡಬೇಕು ಎಂಬ ಒತ್ತಾಯ ಮಾಡಲಾಗುತ್ತಿದೆ.
ಆದರೆ, ಖಜಕಿಸ್ತಾನದಲ್ಲಿ ರೇಪಿಸ್ಟ್ ಗಳಿಗೆ ದೊಡ್ಡ ಶಿಕ್ಷೆ ನೀಡಲಾಗುತ್ತಿದೆ.
ಖಜಕಿಸ್ತಾನದಲ್ಲಿ ಈ ಕಾನೂನನ್ನು 2016ರಲ್ಲೇ ಜಾರಿಗೆ ತಂದಿದ್ದಾರೆ.
ಮಕ್ಕಳ ಮೇಲೆ ಲೈಂಗಕ ದೌರ್ಜನ್ಯ ನಡೆಸಿರುವ ಅಪರಾಧ ಸಾಬೀತಾಗಿರುವ ಸುಮಾರು 2000 ಮಂದಿ ಅಪರಾಧಿಗಳಿದ್ದಾರೆ. ಇವರಿಗೆ ನಪುಂಸಕತ್ವದ ಶಿಕ್ಷೆ ನೀಡಲಾಗಿದೆ. ಇಂಜೆಕ್ಷನ್ ಮೂಲಕ ಅಪರಾಧಿಗಳ ಗಂಡಸ್ತನ ತೆಗೆಯಲಾಗಿದೆ . ಸರ್ಕಾರವೇ ಇದಕ್ಕೆ ಬೇಕಾದ ಧನ ಸಹಾಯ ಮಾಡಿದೆ.
ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಪರಿಣಾಮ ಇಂಥಾ ಕಠಿಣ ಶಿಕ್ಷೆಯನ್ನು ನೀಡಲಾಗುತ್ತಿದೆ. ರೇಪಿಸ್ಟ್ ಗಳಿಗೆ ಖಜಕಿಸ್ತಾನದಲ್ಲಿ ಸಂತಾನಹರಣ ಶಿಕ್ಷೆ ಕಾಯಂ ಆಗಿದೆ.